ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಕಾಲ್ಗುಣದಿಂದ ಕಲ್ಯಾಣ ಕರ್ನಾಟಕ ಹೆಸರು!

ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಹೇಳಿಕೆ
Last Updated 17 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೀದರ್‌: ‘ನನ್ನ ಕಾಲ್ಗುಣದಿಂದ ಹೈದರಾಬಾದ್‌ ಕರ್ನಾಟಕವು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣಗೊಂಡಿದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಮಂಗಳವಾರ ಹೇಳಿದರು.

ಇಲ್ಲಿಯ ಪೊಲೀಸ್ ಪರೇಡ್‌ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ‘ಕಲ್ಯಾಣ ಕರ್ನಾಟಕ ಸಂತರ ಹಾಗೂ ಸ್ವಾಮೀಜಿಗಳ ಬೇಡಿಕೆ ಆಗಿತ್ತು. ಸಚಿವ ಸಂಪುಟದಲ್ಲಿ ನಾನೇ ವಿಷಯ ಪ್ರಸ್ತಾಪಿಸಿದ್ದೆ. ನಂತರ ಹೆಸರು ಬದಲಾಯಿತು’ ಎಂದರು.

‌ಅಧಿಕಾರಿಗಳು ಕನ್ನಡದಲ್ಲಿ ಬರೆದು ಕೊಟ್ಟ ನಾಲ್ಕು ಪುಟಗಳ ಭಾಷಣವನ್ನು ಓದಲು ಸಾಧ್ಯವಾಗದೇ ಹಿಂದಿಯಲ್ಲಿ ಮಾತನಾಡಿದರು.

‘ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿರಲಿಲ್ಲ. ಹೋರಾಟಗಾರರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್‌ ಪ್ರಯತ್ನದ ಫಲವಾಗಿ ನಂತರ ಸ್ವಾತಂತ್ರ್ಯ ಲಭಿಸಿತು’ ಎಂದು ತಪ್ಪಾಗಿ ವಿವರಿಸಿದರು. ವಾಸ್ತವವಾಗಿ ಮುಂಬೈ ಕರ್ನಾಟಕ 1947ರಲ್ಲೇ ಸ್ವತಂತ್ರ ಭಾರತ ಒಕ್ಕೂಟದಲ್ಲಿ ಸೇರಿತ್ತು.

ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಲ್ಲಿಸಿ ಎನ್ನುವ ಬದಲು ‘ಪ್ಲಾಸಿಕ್‌’ ಎಂದೇ ಉಲ್ಲೇಖಿಸಿದರು. ಇಡೀ ಭಾಷಣವನ್ನು ತಪ್ಪು ತಪ್ಪಾಗಿ ಮಾಡಿ ಅಲ್ಲಿದ್ದವರಿಗೆ ಮುಜುಗರ ಉಂಟುಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT