ಬುಧವಾರ, ನವೆಂಬರ್ 20, 2019
27 °C

LIVE: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

Published:
Updated:

‘ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ’ಕ್ಕಾಗಿ ಆಗೊಮ್ಮೆ ಈಗೊಮ್ಮೆ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇಂಥ ಸನ್ನಿವೇಶದಲ್ಲೇ, ಹೈದರಾಬಾದ್‌ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿದೆ. ಹೈದರಾಬಾದ್‌ ಕರ್ನಾಟಕ ವಿಮೋಚನೆಯ ದಿನವಾದ ಸೆಪ್ಟೆಂಬರ್ 17ರಂದು, ಬೀದರ್‌, ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ‘ಕಲ್ಯಾಣ ಕರ್ನಾಟಕ ಉತ್ಸವ‘ ದಿನವಾಗಿ ಆಚರಿಸಲಾಗುತ್ತಿದೆ. 

ಕಲಬುರ್ಗಿಯಲ್ಲಿ 20 ಎಕರೆ ವಿಸ್ತಾರದಲ್ಲಿ ಅನುಭವ ‌ಮಂಟಪ ನಿರ್ಮಾಣಕ್ಕೆ ₹20‌ ಕೋಟಿ

12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಮಾದರಿಯಲ್ಲಿ ಕಲಬುರ್ಗಿಯಲ್ಲಿ 20 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಪೂರ್ಣ ಓದು: https://bit.ly/2kNubip

ಬೀದರ್‌: ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಸಚಿವರ ಭಾಷಣದ ಎಡವಟ್ಟು 

 ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಭಾಷಣದಲ್ಲಿ ತಪ್ಪು ಅಂಶಗಳನ್ನು ಉಲ್ಲೇಖಿಸುವ ಮೂಲಕ ಪಕ್ಷದ ಮುಖಂಡರು ಮುಜುಗರಕ್ಕೆ ಒಳಗಾಗುವಂತೆ ಮಾಡಿದರು. ಅಧಿಕಾರಿಗಳು ಕನ್ನಡದಲ್ಲಿ ಬರೆದುಕೊಟ್ಟ ನಾಲ್ಕು ಪುಟಗಳ ಭಾಷಣವನ್ನು ಓದಲು ಸಾಧ್ಯವಾಗದೆ ಹಿಂದಿಯಲ್ಲಿ ಮಾತನಾಡಿದರು. ಪೂರ್ಣ ಓದು: https://bit.ly/2kkc03x

ಉಸ್ತುವಾರಿ ಹಂಚಿಕೆಗೆ ಗುಜರಾತ್ ಮಾದರಿ: ಲಕ್ಷ್ಮಣ ಸವದಿ

'ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಜರಾತ್ ಮಾದರಿಯನ್ನು ಅನುಸರಿಸಿದ್ದಾರೆ' ಎಂದು ಉಸ್ತುವಾರಿ ಸಚಿವ ‌ಲಕ್ಷ್ಮಣ ಸವದಿ ಹೇಳಿದರು. ಪೂರ್ಣ ಓದು: https://bit.ly/2lRlB2q

ಗುಲಬರ್ಗಾ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಧ್ಯಯನ ಪೀಠ ಸ್ಥಾಪನೆ: ಸಿಎಂ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ‌ಸಂಬಂಧಿಸಿದಂತೆ 371 (ಜೆ) ಕಲಂನ ವಿಶೇಷ ಕೋಶದ ಕಚೇರಿ ಪ್ರಸ್ತುತ ಬೆಂಗಳೂರಿನಲ್ಲಿದ್ದು ಅದರ ಶಾಖಾ ಕಚೇರಿಯನ್ನು ಕಲಬುರ್ಗಿಯಲ್ಲಿ ಆರಂಭಿಸಲಾಗುವುದು‌...ಪೂರ್ಣ ಓದು: https://bit.ly/2lXDb4A

ಅಸಮಾನತೆ ಹೋಗಲಾಡಿಸುವುದು ಸರ್ಕಾರದ ಗುರಿ: ಕಾರಜೋಳ

ಸರ್ಕಾರವು ಈ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಇದಕ್ಕಾಗಿ ಮೀಸಲಿದೆ ಎಂದು ತಿಳಿಸಿದರು.

ಪೂರ್ಣ ಓದು: https://bit.ly/2kPRg3Q

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ₹422 ಕೋಟಿ ವೆಚ್ಚ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ 2013-14ನೇ ಸಾಲಿನಿಂದ 2019-20 ರವರೆಗೆ ₹832 ಕೋಟಿ ಅನುದಾನ ಹಂಚಿಕೆಯಾಗಿದ್ದು ಆ ಪೈಕಿ ₹422 ಕೋಟಿ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.  

ಪೂರ್ಣ ಓದು: https://bit.ly/2lUa6at

10:15- ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಯಾದಗಿರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಧ್ವಜರೋಹಣ ನೆರವೇರಿಸಿದರು

10:10- ಕಲಬುರ್ಗಿಯಲ್ಲಿ ಸಿಎಂ

ಕಲಬುರ್ಗಿಯ ಪೊಲೀಸ್ ‌ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ‌ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಷ್ರಧ್ವಜಾರೋಹಣ ಮಾಡಿದರು. ಇದಕ್ಕೂ ಮುನ್ನ ಎಸ್‌ವಿಪಿ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್  ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಕೊಪ್ಪಳ: 72ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

10:05– ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸೆಕ್ರೆಟರಿಯೆಟ್‌: ಯಡಿಯೂರಪ್ಪ 

ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಅಭಿವೃದ್ಧಿಗೆ ಪ್ರತ್ಯೇಕ ಸೆಕ್ರೆಟರಿಯೆಟ್‌ ರಚಿಸಿ‌ ಹೆಚ್ಚು ಅನುದಾನ ಬಿಡುಗಡೆ ‌ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಲಬುರ್ಗಿಯಲ್ಲಿ ಘೋಷಿಸಿದರು. ಪೂರ್ಣ ಓದು: https://bit.ly/2lTZisK

10:00- ಕಲ್ಯಾಣ ಕರ್ನಾಟಕ: ಹೆಸರಷ್ಟೇ ಸಾಕೆ?

ಇದುವರೆಗಿನ ಸರ್ಕಾರಗಳು ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷಿಸುತ್ತಲೇ ಬಂದಿವೆ ಎಂದು ದೂರುವ ಬಹುತೇಕರು ‘ಈ ಮರುನಾಮಕರಣದಿಂದ ಏನಾದರೂ ಪವಾಡವಾಗುತ್ತದೆ’ ಎಂದು ನಂಬುವ ಸ್ಥಿತಿಯಲ್ಲಿ ಇಲ್ಲ.

ಪೂರ್ಣ ಓದು: https://bit.ly/2kBvcu0

ಪ್ರತಿಕ್ರಿಯಿಸಿ (+)