ವಿದ್ಯುತ್‌ ಪ್ರವಹಿಸಿ ಕಾಡಾನೆ ಸಾವು

ಶನಿವಾರ, ಏಪ್ರಿಲ್ 20, 2019
28 °C

ವಿದ್ಯುತ್‌ ಪ್ರವಹಿಸಿ ಕಾಡಾನೆ ಸಾವು

Published:
Updated:
Prajavani

ಕನಕಪುರ: ಉಯ್ಯಂಬಳ್ಳಿ ಗ್ರಾಮದ ಶಿವಲಿಂಗೇಗೌಡ ಅವರ ಜಮೀನಿನಲ್ಲಿ ರಾಗಿ ಬೆಳೆ ಮೇಯಲು ಹೋದ ಕಾಡಾನೆಯೊಂದು ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಸಾವ‌ನ್ನಪ್ಪಿದೆ. ನಾಲ್ಕೂವರೆ ವರ್ಷದ ಗಂಡಾನೆ ಇದಾಗಿದೆ.

ಕಾವೇರಿ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜು ಮತ್ತು ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‌ ಕರತಂಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಪುಟ್ಟಪ್ಪ, ಕಿರಿಯ ಎಂಜಿನಿಯರ್‌ ಸತೀಶ್‌ ಸ್ಥಳ ಪರಿಶೀಲನೆ ನಡೆಸಿ, ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ರೈತನ ವಿರುದ್ಧ ದೂರು ನೀಡಿದ್ದಾರೆ.

ಅರಣ್ಯ ಮತ್ತು ಬೆಸ್ಕಾಂ ಇಲಾಖೆ ನೀಡಿರುವ ದೂರಿನ ಅನ್ವಯ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿ
ಕೊಂಡಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ ಮುರಳಿ.ಟಿ, ಎಎಸ್‌ಐ ಪ್ರಭುಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದರು. ಪಶು ಆರೋಗ್ಯಾಧಿಕಾರಿ ಡಾ.ಶ್ರೀಲೇಖ ಆನೆ ಮರಣೋತ್ತರ ಪರೀಕ್ಷೆ ನಡೆಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !