ಪೊರಕೆ ಸುತ್ತಲು ಕನ್ನಡ ಬಾವುಟ ಬಳಕೆ

7

ಪೊರಕೆ ಸುತ್ತಲು ಕನ್ನಡ ಬಾವುಟ ಬಳಕೆ

Published:
Updated:
Deccan Herald

ಬೇಲೂರು: ಪುರಸಭೆ ಆವರಣದಲ್ಲಿ ಪೊರಕೆಗಳನ್ನು ಕನ್ನಡ ಬಾವುಟದಲ್ಲಿ ಸುತ್ತಿಟ್ಟಿದ್ದು ಕಂಡು ಬಂದಿದೆ.

‘ಪುರಸಭೆ ಎದುರು ಪೊರಕೆಯನ್ನು ಕನ್ನಡ ಬಾವುಟದಲ್ಲಿ ಸುತ್ತಿಡಲಾಗಿತ್ತು. ಇದರಿಂದ ಕನ್ನಡ ಧ್ವಜಕ್ಕೆ ಅಪಮಾನವಾಗಿದೆ. ಪುರಸಭೆ ಅಧ್ಯಕ್ಷೆ ಡಿ.ಆರ್‌.ಭಾರತಿ, ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌ ಕ್ಷಮೆಯಾಚಿಸಬೇಕು. ಹೀಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬೋಜೇಗೌಡ ಒತ್ತಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್‌.ಎಂ.ದಯಾನಂದ್‌ ಎಚ್ಚರಿಸಿದ್ದಾರೆ.

ತಪ್ಪೊಪ್ಪಿಕೊಂಡ ನೌಕರ: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌, ‘ಪೊಲೀಸರಿಗೆ ದೂರು ನೀಡಲಾ
ಗಿದೆ. ಹೊರಗುತ್ತಿಗೆ ನೌಕರ ಪ್ರಕಾಶ್‌ ಈ ಕೆಲಸ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !