ಬುಧವಾರ, ನವೆಂಬರ್ 20, 2019
22 °C

ಕಾಂತಾವರ ಉತ್ಸವ: ವಿವಿಧ ಪ್ರಶಸ್ತಿಗಳಿಗೆ ಆಯ್ಕೆ

Published:
Updated:
Prajavani

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘವು ನವೆಂಬರ್ 1 ಮತ್ತು 2 ರಂದು ಆಚರಿಸುವ 'ಕಾಂತಾವರ ಉತ್ಸವ'ದಲ್ಲಿ ಕೊಡಮಾಡುವ ಐದು ದತ್ತಿನಿಧಿ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ದತ್ತಿನಿಧಿಯ ‘ಕರ್ನಾಟಕ ಏಕೀಕರಣ ಸಾಂಸ್ಕೃತಿಕ ಪ್ರಶಸ್ತಿ'ಗೆ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ, ಪಂಡಿತ ಯಜ್ಞನಾರಾಯಣ ಉಡುಪ ದತ್ತಿನಿಧಿಯ ‘ವಿದ್ವತ್ಪರಂಪರಾ ಪ್ರಶಸ್ತಿ'ಗೆ ಡಾ.ಎಸ್.ಆರ್. ವಿಘ್ನರಾಜ, ಡಾ.ಯು.ಪಿ.ಉಪಾಧ್ಯಾಯ ದತ್ತಿನಿಧಿಯ ‘ಸಂಶೋಧನಾ ಪ್ರಶಸ್ತಿ‘ಗೆ ಪುಟ್ಟು ಕುಲಕರ್ಣಿ, ಮೊಗಸಾಲೆ ಪ್ರತಿಷ್ಠಾನದ ‘ಕಾಂತಾವರ ಲಲಿತಕಲಾ ಪ್ರಶಸ್ತಿ'ಗೆ ಪಿ.ಎಸ್.ಪುಂಚಿತ್ತಾಯ ಹಾಗೂ ಸರೋಜಿನಿ ನಾಗಪ್ಪಯ್ಯ ದತ್ತಿನಿಧಿಯ ‘ಕಾಂತಾವರ ಸಾಹಿತ್ಯ ಪುರಸ್ಕಾರ’ ಶಾರದಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳು ತಲಾ ₹ 12 ಸಾವಿರ ನಗದು, ತಾಮ್ರಪತ್ರ ಒಳಗೊಂಡಿದೆ. ಸಂಘದ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ ಅಧ್ಯಕ್ಷತೆಯಲ್ಲಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)