ಶನಿವಾರ, ನವೆಂಬರ್ 23, 2019
18 °C
ಆರೋಪ ನಿರಾಕರಿಸಿದ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ

ಮಹಿಳೆ ಜತೆ ಸ್ವಾಮೀಜಿ ಅಶ್ಲೀಲ ಚಾಟಿಂಗ್‌

Published:
Updated:
Prajavani

ಯಾದಗಿರಿ: ಸುರಪುರ ತಾಲ್ಲೂಕಿನ ಹುಣಸಿಹೊಳಿಯ ಕಣ್ವಮಠ ಪೀಠಾಧಿಪತಿ ವಿದ್ಯಾವಾರಿಧಿತೀರ್ಥ ಸ್ವಾಮೀಜಿ ಮೈಸೂರಿನ ಮಹಿಳೆಯೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲವಾಗಿ ಚಾಟಿಂಗ್‌ ನಡೆಸಿದ್ದಾರೆ ಎನ್ನುವ ವಿಡಿಯೊ ಮತ್ತು ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪೂಜೆ ನೆಪದಲ್ಲಿ ಬೆಂಗಳೂರಿನ ಯಲಹಂಕ ಶಾಖಾ ಮಠಕ್ಕೆ ಬರುವಂತೆ ಮಹಿಳೆಗೆ ಆಹ್ವಾನಿಸಿರುವುದು ಅಡಿಯೊದಲ್ಲಿದೆ. ಮಹಿಳೆಯ ಪತಿ ಹನಿಟ್ರ್ಯಾಪ್ ಮಾಡಿದ್ದು ₹1 ಕೋಟಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ಆದರೆ, ಈ ಕುರಿತು ಪ್ರಕರಣ ದಾಖಲಾಗಿಲ್ಲ.

‘ನನ್ನ ಮೊಬೈಲ್‌ ದುರ್ಬಳಕೆ ಮಾಡಿಕೊಂಡು ಕೆಲವರು ಈ ಷಡ್ಯಂತ್ರ ಮಾಡಿದ್ದಾರೆ. ಆ ಮಹಿಳೆ ಯಾರು ಎಂಬುದೇ ಗೊತ್ತಿಲ್ಲ.  ನಾಲ್ಕೂವರೆ ವರ್ಷಗಳ ಹಿಂದೆ ನನ್ನ ಪೀಠಾರೋಹಣದ ವೇಳೆ ಸಂಸಾರಿ ಸ್ವಾಮೀಜಿಯನ್ನು ಮಠಕ್ಕೆ ನೇಮಿಸಬೇಡಿ ಎಂದು ಕೆಲವರು ಆಕ್ಷೇಪಿಸಿದ್ದರು. ಇಂಥದ್ದೇ ಪತ್ರ ವ್ಯವಹಾರ ಮಾಡಿ, ನನ್ನ ಗುರುಗಳನ್ನೂ ಪೀಠದಿಂದ ಇಳಿಸಲು ಪ್ರಯತ್ನಿಸಲಾಗಿತ್ತು.‌ ನಾನು ಪೀಠತ್ಯಾಗ ಮಾಡುತ್ತೇನೆ. ಸಮಾಜ ಗುರುತಿಸುವ ವ್ಯಕ್ತಿಯನ್ನು ಪೀಠಾಧಿಪತಿ ಮಾಡುತ್ತೇನೆ’ ಎಂದು ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆದಿದೆ. ಇನ್ನೆರಡು ದಿನಗಳಲ್ಲಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ’ ಎಂದು ಮಠದ ವಕ್ತಾರ ಅನಿಲ ದೇಶಪಾಂಡೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)