ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಆದೇಶ ಧಿಕ್ಕರಿಸಿ ದ್ವಿತೀಯ ಪಿಯು ಆರಂಭ

Last Updated 27 ಫೆಬ್ರುವರಿ 2020, 19:19 IST
ಅಕ್ಷರ ಗಾತ್ರ

ಬೆಂಗಳೂರು:ದ್ವಿತೀಯ ಪಿಯು ತರಗತಿಗಳನ್ನು ಮೇ 18ರಂದು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿಹಲವು ಖಾಸಗಿ ಕಾಲೇಜುಗಳು ಈಗಾಗಲೇ ತರಗತಿಗಳನ್ನು ಆರಂಭಿಸಿವೆ.

ಫೆ. 25ರಂದು ಪ್ರಥಮ ಪಿಯು ಪರೀಕ್ಷೆ ಮುಕ್ತಾಯಗೊಂಡಿದೆ. ಮರುದಿನದಿಂದಲೇ ದ್ವಿತೀಯ ಪಿಯು ತರಗತಿ
ಗಳನ್ನು ಕೆಲವು ಖಾಸಗಿ ಕಾಲೇಜುಗಳು ಆರಂಭಿಸಿವೆ. ವಿಶೇಷವೆಂದರೆ ಫಲಿತಾಂಶ ಪ್ರಕಟವಾಗುವ ಮುನ್ನವೇಪಾಠ ಮಾಡಲಾಗುತ್ತಿದೆ.

ಅಕ್ಟೋಬರ್, ನವೆಂಬರ್ ವೇಳೆಗೆ ಪಾಠ ಪೂರ್ಣಗೊಳಿಸಿ, ಪುನರಾವಲೋಕನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಒತ್ತಡ ನಿವಾರಿಸಲೆಂದೇ ವಾರ್ಷಿಕ ರಜೆ ಕೊಡಲಾಗುತ್ತದೆ. ರಜೆಯಲ್ಲೂ ತರಗತಿ ನಡೆಸಿ ಮಕ್ಕಳ ಮೇಲಿನ ಒತ್ತಡ ಹೆಚ್ಚಿಸಲಾಗುತ್ತಿದೆ ಎಂದು ಹಲವು ಪೋಷಕರು ದೂರಿದ್ದಾರೆ.

ಕೆಲವು ಕಾಲೇಜುಗಳು ಒಂದು ತಿಂಗಳು ರಜೆ ನೀಡಿದ್ದು, ಮಾರ್ಚ್ 23ರಿಂದ ತರಗತಿ ಆರಂಭವಾಗುತ್ತದೆ ಎಂದು ಈಗಾಗಲೇ ಪ್ರಕಟಿಸಿವೆ.ಈ ಬಗ್ಗೆ ವಿವರಣೆ ಪಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT