ಎಚ್‌ಡಿಕೆ ರಾಮನಗರ, ಹಾಸನ, ಮಂಡ್ಯಕ್ಕೆ ಮಾತ್ರ ಮುಖ್ಯಮಂತ್ರಿನಾ..? ಬಿಜೆಪಿ ಪ್ರಶ್ನೆ

7

ಎಚ್‌ಡಿಕೆ ರಾಮನಗರ, ಹಾಸನ, ಮಂಡ್ಯಕ್ಕೆ ಮಾತ್ರ ಮುಖ್ಯಮಂತ್ರಿನಾ..? ಬಿಜೆಪಿ ಪ್ರಶ್ನೆ

Published:
Updated:

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ ಕೇವಲ ರಾಮನಗರ, ಹಾಸನ, ಮಂಡ್ಯಕ್ಕೆ ಮಾತ್ರ ಮುಖ್ಯಮಂತ್ರಿನಾ..? ಎಂದು ಭಿತ್ತಿ ಪತ್ರಗಳನ್ನು ಹಿಡಿದು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. 

ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ ಯಾವುದೇ ವಿಶೇಷ ಅನುದಾನ ಯೋಜನೆಗಳು ಘೋಷಣೆ ಆಗದ ಕುರಿತು ಬಿಜೆಪಿ ಸದನದಲ್ಲಿ ಘೋಷಣೆಗಳೊಂದಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಆಯವ್ಯಯಕ್ಕೆ ವಿರೋಧ ವ್ಯಕ್ತಪಡಿಸಿತು. 

ಅಲ್ಪಸಂಖ್ಯಾತ ವರ್ಗಕ್ಕೆ ವಿಶೇಷ ಅನುದಾನ ಘೋಷಣೆಯಾಗಿರದ ಕುರಿತು ಹಲವು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. 

ರೇವಣ್ಣನ ವಾಸ್ತು ಶಿಲ್ಪದ ಬಜೆಟ್‌ !

* ಇದು ರೇವಣ್ಣನವರ ವಾಸ್ತು ಶಿಲ್ಪದ ಬಜೆಟ್‌. ಹಾಸನದ ಅಭಿವೃದ್ಧಿಗಾಗಿ ಮಾತ್ರ ಮಾಡಿರುವ ಬಜೆಟ್‌ ಆಗಿದೆ. ಕರಾವಳಿ, ಉತ್ತರ ಕರ್ನಾಟಕಕ್ಕೆ ಏನೊಂದೂ ಇಲ್ಲ. ಕೋಲಾರ, ಬೆಂಗಳೂರಿಗೂ ಏನೂ ಇಲ್ಲ. ದಿನಬಳಕೆಯ ವಿದ್ಯುತ್‌, ಪೆಟ್ರೋಲ್‌–ಡೀಸೆಲ್‌ ಮೇಲಿನ ತೆರಿಗೆ ಏರಿಕೆ ಬಡವರ ಪರವಾಗಿದೆಯೇ?
– ಆರ್‌.ಅಶೋಕ್‌, ಬಿಜೆಪಿ ಶಾಸಕ 

* ಸಂಪೂರ್ಣ ಸಾಲ ಮನ್ನಾ ಎಂದು ಹೇಳಲಾಗಿತ್ತು. ಕೇವಲ ₹6500 ಕೋಟಿಗೆ ಸೀಮಿತ ಹಾಗೂ ಪ್ರತಿ ರೈತರಿಗೆ ₹2 ಲಕ್ಷ ಸೀಮಿತ ಮಾಡಿದ್ದೀರಿ. ಇದು ರೈತರಿಗೆ ನಿರಾಶೆ ತಂದಿದೆ. ₹1.5 ಲಕ್ಷ ಕೋಟಿ ನೀರಾವರಿಗೆ ಕೊಡುವುದಾಗಿ ಘೋಷಣೆಯಾಗಿತ್ತು. ನಗರಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ, ಆರೋಗ್ಯ ಇಲಾಖೆ ಸೇರಿ ಅನೇಕ ಇಲಾಖೆಗಳಲ್ಲಿ ಅನುದಾನ ಹಿಂದಿಗಿಂತಲೂ ಕಡಿಮೆ ಮಾಡಲಾಗಿದೆ. 

– ಜಗದೀಶ್‌ ಶೆಟ್ಟರ, ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 5

  Sad
 • 0

  Frustrated
 • 6

  Angry

Comments:

0 comments

Write the first review for this !