ಶುಕ್ರವಾರ, ಡಿಸೆಂಬರ್ 6, 2019
19 °C

ಯಲ್ಲಾಪುರ: ಉಪ ಚುನಾವಣೆ ಮುನ್ನಾದಿನ ಹಣ ಹಂಚಿಕೆ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಯಲ್ಲಾಪುರ ಕ್ಷೇತ್ರದ ಉಪಚುನಾವಣೆಗೆ ಒಂದು ದಿನ ಇರುವಾಗ ಬಿಜೆಪಿ ಅಭ್ಯರ್ಥಿಯ ಆಪ್ತರೊಬ್ಬರು ತಾಲ್ಲೂಕಿನ ಬನವಾಸಿ ಸಮೀದ ದನಗನಹಳ್ಳಿಯಲ್ಲಿ ಜನರಿಗೆ ಹಣ ಹಂಚುತ್ತಿರುವ ವಿಡಿಯೊ, ಬುಧವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಲ್ಕೈದು ಜನರಿಗೆ ಅವರು ಹಣ ಹಂಚಿಕೆ ಮಾಡಿರುವ ದೃಶ್ಯ ಒಳಗೊಂಡ ವಿಡಿಯೊದಲ್ಲಿ, ‘100 ವೋಟಿನ ರೊಕ್ಕ ಕೊಡಿರಿ, ರವಿ ಮನೆಗೆ ಹೋಗಿ ₹ 50 ಸಾವಿರ ಕೊಡಿ, ಕೆಲವು ಮನೆಯವರು ಒಂದು ರೂಪಾಯಿ ಕೂಡ ಮುಟ್ಟಲ್ಲ, ಪುತ್ತೂರಾಯನ ಹೆಸರು ಹೊಡೆಯಿರಿ’ ಎಂಬಿತ್ಯಾದಿ ಮಾತುಗಳು ಕೇಳಿಬಂದಿವೆ. ಈ ಮಾತುಕತೆ ನಡೆದಿರುವ ಸ್ಥಳದ ಪಕ್ಕದಲ್ಲೇ ಬಿಜೆಪಿ ಬಾವುಟವಿರುವ ವಾಹನವೂ ನಿಂತಿರುವುದು ವಿಡಿಯೊದಲ್ಲಿ ಕಾಣುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು