ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಎರಡು ಗ್ರಾಮದಲ್ಲಿ ಮತದಾನ ಬಹಿಷ್ಕಾರ

7

ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಎರಡು ಗ್ರಾಮದಲ್ಲಿ ಮತದಾನ ಬಹಿಷ್ಕಾರ

Published:
Updated:

ಶಿವಮೊಗ್ಗ: ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನ ಹೊಳೆ ಬೆಳೆಗಲು ಗ್ರಾಮ ಹಾಗೂ ದೊಡ್ಡಮಟ್ಟಿ ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಹೊಳೆಬೆಳಗಲು ಮತಗಟ್ಟೆ ಸಂಖ್ಯೆ 152ರಲ್ಲಿ ಮತದಾನ ಮಾಡಲು ಗ್ರಾಮಸ್ಥರು ಬರುತ್ತಿಲ್ಲ. ಈ ಗ್ರಾಮದಲ್ಲಿ 500ಕ್ಕೂ ಹೆಚ್ಚ ಮತದಾರು ಇದ್ದಾರೆ.

ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ದೊಡ್ಡಮಟ್ಟಿ ಯಲ್ಲೂ ಮತದಾನ ಬಹಿಷ್ಕಾರ ಮಾಡಲಾಗಿದೆ.

ಮತಗಟ್ಟೆ ಸಂಖ್ಯೆ 11ಕ್ಕೆ ಮತದಾನ ಮಾಡಲು ಗ್ರಾಮಸ್ಥರು ಬರುತ್ತಿಲ್ಲ. 400ಕ್ಕೂ ಹೆಚ್ಚು ಮತದಾರರು ಈ ಗ್ರಾಮದಲ್ಲಿದ್ದಾರೆ.

ವಿವಿ ಪ್ಯಾಡ್‌ ಸಮಸ್ಯೆ
ಸಾಗರ ತಾಲ್ಲೂಕಿನ ತಾಳಗುಪ್ಪ ಮತಗಟ್ಟೆ ಸಂಖ್ಯೆ 219ರಲ್ಲಿ ವಿವಿ ಪ್ಯಾಡ್ ಸಮಸ್ಯೆ ಹಿನ್ನಲೆ ಒಂದು ಗಂಟೆ ತಡವಾದರೂ ಮತದಾನ ಆರಂಭವಾಗಿರಲಿಲ್ಲ. ಮತದಾನ ಮಾಡಲು ನೂರಾರು ಮತದಾರರು ಸಾಲುಗಟ್ಟಿ ನಿಂತಿದ್ದರು.

ಗೆಲುವು ನಮ್ಮದೇ: ರಾಘವೇಂದ್ರ 
ಶನಿವಾರ ಆಂಜನೇಯ ವಾರ, ದೆವರ ಆಶೀರ್ವಾದ ಪಡೆದು ಮತದಾನ ಮಾಡಿದ್ದೇವೆ. ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಕಳದೆ 25 ದಿನಗಳಿಂದ 8 ಕ್ಷೆತ್ರಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರ ಪರಿಶ್ರಮ ಹಾಕಿದ್ದಾರೆ. ಮತ್ತೊಮ್ಮೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂದು ಬಿಜೆಪಿ ಅಭ್ಯರ್ಥಿ ವಿ.ವೈ.ರಾಘವೇಂದ್ರ ಹೇಳಿದರು.


ಕುಬಟೂರಿನ‌ ಮತಗಟ್ಟೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮತಚಲಾಯಿಸಿದರು.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !