ಮಂಗಳವಾರ, ಜೂಲೈ 7, 2020
28 °C

Covid-19 Karnataka Update: ಒಟ್ಟು ಸೋಂಕಿತರ ಸಂಖ್ಯೆ 3,408, ಸಾವಿನ ಸಂಖ್ಯೆ 52

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇ 31ರ ಸಂಜೆ 5 ಗಂಟೆಯಿಂದ ಜೂನ್‌ 01ರ ಸಂಜೆ 5 ಗಂಟೆವರೆಗೆ 187 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,408ಕ್ಕೆ ತಲುಪಿದ್ದು, ಈವರೆಗೆ 52 ಮಂದಿ ಸಾವಿಗೀಡಾಗಿದ್ದಾರೆ.

2,020 ಕ್ರಿಯಾಶೀಲ ಪ್ರಕರಣಗಳಿದ್ದು, 1,328 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. 

ರಾಜ್ಯದಾದ್ಯಂತ 110 ಕೊರೊನಾ ಸೋಂಕಿತರು ಗುಣಮುಖರಾದ ಕಾರಣ ವಿವಿಧ ಆಸ್ಪತ್ರೆಗಳಿಂದ ಇಂದು ಅವರನ್ನು ಬೀಳ್ಕೊಡಲಾಗಿದೆ. 

ಉಡುಪಿಯಲ್ಲಿ 73, ಬೆಂಗಳೂರು ನಗರದಲ್ಲಿ 28, ಕಲಬುರ್ಗಿಯಲ್ಲಿ 24, ಹಾಸನದಲ್ಲಿ 16, ಮಂಡ್ಯದಲ್ಲಿ 15, ಶಿವಮೊಗ್ಗದಲ್ಲಿ 09, ಚಿಕ್ಕಬಳ್ಳಾಪುರದಲ್ಲಿ 05 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು