ಶನಿವಾರ, ಜುಲೈ 31, 2021
28 °C

Covid-19 Karnataka Update: ಒಂದೇ ದಿನದಲ್ಲಿ 257 ಹೊಸ ಪ್ರಕರಣ, ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೂನ್‌ 03ರ ಸಂಜೆ 5 ಗಂಟೆಯಿಂದ ಜೂನ್‌ 04ರ ಸಂಜೆ 5 ಗಂಟೆವರೆಗೆ 257 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,320ಕ್ಕೆ ತಲುಪಿದ್ದು, ಕೊರೊನಾ ಸೋಂಕಿನಿಂದ ಈವರೆಗೂ 57 ಮಂದಿ ಸಾವಿಗೀಡಾಗಿದ್ದಾರೆ.

1,610 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2,651ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. 

13 ಕೊರೊನಾ ಪೀಡಿತರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಉಡುಪಿಯಲ್ಲಿ 92, ರಾಯಚೂರಿನಲ್ಲಿ 88,  ಹಾಸನ ಹಾಗೂ ಮಂಡ್ಯದಲ್ಲಿ 15, ದಾವಣಗೆರೆಯಲ್ಲಿ 13 , ಬೆಳಗಾವಿ 12 ಮತ್ತು ಬೆಂಗಳೂರು ನಗರದಲ್ಲಿ 09 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು