ಉಪ ಚುನಾವಣೆ ಮತದಾನ ಮುಕ್ತಾಯ: ಸೋಲು – ಗೆಲುವಿನ ಲೆಕ್ಕಾಚಾರ ಆರಂಭ

7

ಉಪ ಚುನಾವಣೆ ಮತದಾನ ಮುಕ್ತಾಯ: ಸೋಲು – ಗೆಲುವಿನ ಲೆಕ್ಕಾಚಾರ ಆರಂಭ

Published:
Updated:

ಬೆಂಗಳೂರು: ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರಗಳು ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು.

ಜಮಖಂಡಿಯಲ್ಲಿ ಶೇಕಡಾ 81.58 ರಷ್ಟು ಮತದಾನವಾಗಿದೆ.

ರಾಮನಗರದಲ್ಲಿ ಶೇಕಡಾ 73.71 ರಷ್ಟು ಮತದಾನವಾಗಿದೆ.

ಬಳ್ಳಾರಿ ಲೋಕಸಭಾ ಉಪ ಚುನಾವಣೆ: ಶೇಕಡಾ 63.85 ರಷ್ಟು ಮತದಾನವಾಗಿದೆ.

ಶಿವಮೊಗ್ಗದಲ್ಲಿ ಶೇಕಡಾ 61.05 ರಷ್ಟು ಮತದಾನವಾಗಿದೆ.

ಮಂಡ್ಯದಲ್ಲಿ ಶೇಕಡಾ 53.93 ರಷ್ಟು ಮತದಾನವಾಗಿದೆ.

ಇದೇ 6ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ಪರ ಈಗಾಗಲೇ ಸೋಲು – ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !