ಬುಧವಾರ, ನವೆಂಬರ್ 13, 2019
18 °C

ನೆರೆ ಪರಿಹಾರ: ₹ 38 ಸಾವಿರ ಕೋಟಿಯಿಂದ ₹ 35 ಸಾವಿರ ಕೋಟಿಗೆ ಇಳಿದ ನಷ್ಟದ ವರದಿ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಮೊದಲು ಅಂದಾಜಿಮಾಡಿ ಸಲ್ಲಿಸಿದ್ದ ವರದಿಯನ್ನು ಬದಲಿಸಿ, ಖಾಸಗಿ ಆಸ್ತಿಗಳಿಗೆ ಆಗಿರುವ ನಷ್ಟವನ್ನು ಹೊರತುಪಡಿಸಿ ಪರಿಷ್ಕೃತ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.

ಈ ಮೊದಲು ₹38,451 ಕೋಟಿ ನಷ್ಟದ ಅಂದಾಜುಮಾಡಿ ವರದಿ ಸಲ್ಲಿಸಲಾಗಿತ್ತು. ಅದರಲ್ಲಿ ಖಾಸಗಿ ಶಾಲೆ, ಆಸ್ಪತ್ರೆ ಕಟ್ಟಡಗಳ ಹಾನಿಯ ಪ್ರಮಾಣವನ್ನೂ ಸೇರಿಸಲಾಗಿತ್ತು. ಖಾಸಗಿ ಆಸ್ತಿಗಳಿಗೆ ಆಗಿರುವ ನಷ್ಟವನ್ನು ಹೊರತುಪಡಿಸಿ ಪರಿಷ್ಕೃತ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಹೊಸದಾಗಿ ₹35,160 ಕೋಟಿ ನಷ್ಟದ ಅಂದಾಜಿನ ವರದಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಮಂಗಳವಾರ ತಿಳಿಸಿದರು.

ನೆರೆ ಹಾನಿ ಸಂಬಂಧ ಪರಿಹಾರ ಕೋರಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪರಿಷ್ಕೃತ ವರದಿ ಸಲ್ಲಿಸಿದ್ದು, ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಲು ಅಧಿಕಾರಿಗಳ ನಿಯೋಗ ದೆಹಲಿಗೆ ಭೇಟಿ ನೀಡಲಿದೆ.

ಎನ್‌ಡಿಆರ್‌ಎಫ್ ನಿಯಮದ ಅನ್ವಯ ₹3891 ಕೋಟಿ ಪರಿಹಾರ ಸಿಗಬಹುದು. ನಿಯಮದ ಪ್ರಕಾರವೇ ಕೇಂದ್ರ ಸರ್ಕಾರ ನೆರವು ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು.

ಅಸಮಾಧಾನ ಇಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ ಮಾಡಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ. ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಮುಖ್ಯಮಂತ್ರಿ ತಮ್ಮ ವಿವೇಚನೆ ಬಳಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುತ್ತಾರೆ. ಈ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸುವುದನ್ನು ಬಿಟ್ಟರೆ ಮತ್ತೆ ಯಾವ ವಿಶೇಷ ಅಧಿಕಾರವೂ ಇರುವುದಿಲ್ಲ. ಎಲ್ಲಕ್ಕಿಂತ ಸಚಿವ ಸ್ಥಾನವೇ ಪ್ರಮುಖವಾದದ್ದು ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)