ಮಂಗಳವಾರ, ಅಕ್ಟೋಬರ್ 15, 2019
27 °C

ನೆರೆ ಸಮೀಕ್ಷೆ: ಸರ್ಕಾರ, ನಾಯಕರಲ್ಲಿ ಗೊಂದಲ

Published:
Updated:

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾನಿಯ ಸಮೀಕ್ಷೆ ವರದಿ ಬಗ್ಗೆ ಸರ್ಕಾರ ಹಾಗೂ ಬಿಜೆಪಿ ನಾಯಕರ ನಡುವೆ ಗೊಂದಲ ಮೂಡಿದೆ.

ನೆರೆ ಹಾನಿ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಲಮಟ್ಟಿಯಲ್ಲಿ ಹೇಳಿದ್ದರೆ, ಸಮೀಕ್ಷೆ ಮುಗಿದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಬೆಂಗಳೂರಿನಲ್ಲಿ ‌ಹೇಳಿದ್ದಾರೆ. ಕೇಂದ್ರಕ್ಕೆ ವರದಿ ಸಲ್ಲಿಕೆಯಾಗುವುದು ಇನ್ನೂ ಬಾಕಿ ಇದೆ ಎಂದು ಗಂಗಾವತಿಯಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನೆರೆ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು, ಮನೆ ಹಾನಿಗೆ ಸಂಬಂಧಿಸಿದಂತೆ ಸ್ವಲ್ಪ ಗೊಂದಲವಿದೆ. ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ₹34 ಸಾವಿರ ಕೋಟಿ ಹಾನಿಯಾಗಿದೆ ಎಂದು ಕರಡು ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಹೆಚ್ಚು ಹಾನಿಯಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

ಸಮೀಕ್ಷೆ ಮಗಿದಿಲ್ಲ: ‘ರಾಜ್ಯದಲ್ಲಿ ಮೂರು ಹಂತದಲ್ಲಿ ನೆರೆ ಸಂಭವಿಸಿದ್ದು, ರಾಜ್ಯ ಸರ್ಕಾರ ಇದುವರೆಗೆ ಪ್ರಾಥಮಿಕ ಸಮೀಕ್ಷೆಯ ವರದಿ ಸಿದ್ಧಪಡಿಸಿಕೊಟ್ಟಿದೆ. ರಸ್ತೆಗೆ ಆಗಿರುವ ಹಾನಿ ಸಹಿತ ಅಂತಿಮ ಸಮೀಕ್ಷೆಗಳನ್ನು ನೆರೆ ಪೂರ್ತಿ ಕಡಿಮೆಯಾದ ಬಳಿಕ ಮಾಡಬೇಕಾಗಿದ್ದು, ಅದಿನ್ನೂ ನಡೆದಿಲ್ಲ. ಇನ್ನೂ ಅಧಿಕೃತ ವರದಿ ಸಿದ್ಧವಾಗಿಲ್ಲ’ ಎಂದು ನಳಿನ್‌ ಕುಮಾರ್ ಕಟೀಲ್‌ ಅವರು ತಿಳಿಸಿದರು.

 

Post Comments (+)