ಪೊಲೀಸರಿಗೆ ಹೊಸ ಮಾದರಿ ಟೋಪಿ

7

ಪೊಲೀಸರಿಗೆ ಹೊಸ ಮಾದರಿ ಟೋಪಿ

Published:
Updated:
Deccan Herald

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳ ಟೋಪಿಗಳನ್ನು ಬದಲಾಯಿಸುವ ಚಿಂತನೆ ನಡೆದಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಟೋಪಿ ಬಗ್ಗೆ ಚರ್ಚೆ ನಡೆಯಿತು.

‘ಈಗ ಧರಿಸುತ್ತಿರುವ ಟೋಪಿಗಳು ಹೆಚ್ಚು ಭಾರವಾಗಿದ್ದು, ಪೊಲೀಸರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಪೊಲೀಸ್ ಮಹಾನಿರ್ದೇಶಕರಿಗೆ ಇತ್ತೀಚೆಗಷ್ಟೇ ಪತ್ರ ಬರೆದಿದೆ. ಹೀಗಾಗಿ, ಟೋಪಿ ಬದಲಾವಣೆ ಮಾಡುವ ಸಂಬಂಧ ಚರ್ಚಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡು, ಕೇರಳ ಪೊಲೀಸರು ಧರಿಸುತ್ತಿರುವ ಟೋಪಿಗಳ ಮಾದರಿಯಲ್ಲೇ ಹೊಸ ಟೋಪಿಗಳನ್ನು ರಾಜ್ಯದಲ್ಲಿ ಬಳಕೆ ಮಾಡುವ ಯೋಚನೆ ಇದೆ. ಆ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ಗೃಹ ಇಲಾಖೆಗೆ ಸಲ್ಲಿಸಬೇಕು. ನಂತರವೇ ಹೊಸ ಟೋಪಿಗಳ ಬಳಕೆ ಜಾರಿಗೆ ಬರಲಿದೆ’ ಎಂದರು.

ಪರಿಶೀಲನೆಗಾಗಿ ತಮಿಳುನಾಡಿನಿಂದ ತರಿಸಲಾಗಿದ್ದ ಟೋಪಿಗಳನ್ನು ಕೆಲವು ಕಾನ್‌ಸ್ಟೆಬಲ್‌ಗಳು ಧರಿಸಿ, ಹಿರಿಯ ಅಧಿಕಾರಿಗಳಿಗೆ ತೋರಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !