ಸೋಮವಾರ, ಡಿಸೆಂಬರ್ 9, 2019
16 °C

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ವಿಶ್ವಾಸಮತ ಯಾಚನೆ ನಡೆದ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸಬೇಕು ಎಂದು ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಇಂದೇ ಸುಪ್ರೀಂಕೋರ್ಟ್‌ ವಿಲೇವಾರಿ ಮಾಡುವ ಸಾಧ್ಯತೆ ಇದೆ. 

ಅತೃಪ್ತರ ಪರ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಇಂದು ಸುಪ್ರೀಂಕೋರ್ಟ್‌ಗೆ ಬರಲಿಲ್ಲ. ಕಲಾಪ ಆರಂಭವಾಗುತ್ತಿದ್ದಂತೆ ‘ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ? ನಾವು ಅವರ ಉಪಸ್ಥಿತಿಯಲ್ಲಿ ತೀರ್ಪು ಪ್ರಕಟಿಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು.

‘ಶೀಘ್ರ ವಿಶ್ವಾಸಮತ ಯಾಚನೆಗೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು’ ಎಂದು ಮುಕುಲ್ ರೋಹಟಗಿ ಪಕ್ಷೇತರ ಶಾಸಕರ ಪರ ಅರ್ಜಿ ಸಲ್ಲಿಸಿದ್ದರು. ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.

ಅರ್ಜಿಯ‌ ಉದ್ದೇಶ ಈಡೇರಿದ್ದರಿಂದ ವಕೀಲರು ಕೋರ್ಟ್‌ಗೆ ಬಂದಿರಲಿಲ್ಲ. ಹಿರಿಯ ವಕೀಲರು ಬಂದಾಗಲೇ ಪ್ರಕರಣದ ವಿಚಾರಣೆ ನಡೆಸಿದರಾಯಿತು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಇನ್ನಷ್ಟು... 

ಜುಲೈ 22 ‘ನಾಳೆ ನೋಡೋಣ’ ರಾಜಕೀಯ ವಿದ್ಯಮಾನ, ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ನಕಾರ

ಸುಪ್ರೀಂ ಕೋರ್ಟ್‌ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು 

ಸುಪ್ರೀಂ ತೀರ್ಪು: ಇವರು ಹೀಗೆ ಹೇಳಿದರು 

ಕಾನೂನಾತ್ಮಕ ಗೊಂದಲ ಹೆಚ್ಚಿಸಿದ ಸುಪ್ರೀಂ ಕೋರ್ಟ್ ತೀರ್ಪು 

‘ನನ್ನ ಭೇಟಿಗೆ ಸುಪ್ರೀಂ ಕೋರ್ಟ್‌ ಅನುಮತಿ ಬೇಕಾ’ 

ರಾಜೀನಾಮೆಯನ್ನು ಕಾಲಮಿತಿಯಲ್ಲಿ ಸ್ಪೀಕರ್‌ ನಿರ್ಧರಿಸಬೇಕು: ಸುಪ್ರೀಂ ತೀರ್ಪು 

ರಾಜೀನಾಮೆ, ಅನರ್ಹತೆ ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ 

ಸುಪ್ರೀಂಕೋರ್ಟ್ ಅಂಗಳದಲ್ಲಿ ಕರ್ನಾಟಕ ರಾಜಕಾರಣ: ಇಲ್ಲಿದೆ ಈವರೆಗಿನ ಸಮಗ್ರ ಮಾಹಿತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು