ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಮೇಶ್‌ಕುಮಾರ್‌ ರಾಜೀನಾಮೆ

Last Updated 29 ಜುಲೈ 2019, 14:40 IST
ಅಕ್ಷರ ಗಾತ್ರ

ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಕಾಂಗ್ರೆಸ್–ಜೆಡಿಎಸ್‌ನ 14 ಶಾಸಕರನ್ನು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಭಾನುವಾರ ಅನರ್ಹಗೊಳಿಸಿದ್ದಾರೆ.ಇದರಿಂದಾಗಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸಲು ಇದ್ದ ಅಡ್ಡಿ, ಆತಂಕಗಳು ನಿವಾರಣೆಯಾಗಿದ್ದವು. ಅದರಂತೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಪಡಿಸಿದ್ದಾರೆ.ವಿಧಾನಸಭಾ ಅಧಿವೇಶನದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

12.29ಸದನ ಸಂಜೆ ಐದು ಗಂಟೆಗೆ ಮುಂದೂಡಿಕೆ

12.25ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕೆ.ಆರ್‌ ರಮೇಶ್‌ ಕುಮಾರ್‌ ರಾಜೀನಾಮೆ ಘೋಷಣೆ

12.17– ಸ್ಪೀಕರ್‌ ಭಾಷಣ

– ನಾನು ಕಳೆದ 14 ತಿಂಗಳಿಂದ ಈ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ

– 2018ರ ಚುನಾವಣೆ ಫಲಿತಾಂಶದ ನಂತರ ನನಗೆ ಸ್ಪೀಕರ್‌ ಸ್ಥಾನ ವಹಿಸಿಕೊಳ್ಳುವಂತೆ ಹೈಕಮಾಂಡ್‌ ಮತ್ತು ರಾಜ್ಯ ನಾಯಕರು ಸೂಚಿಸಿದ್ದರು.

– ಸಿದ್ದರಾಮಯ್ಯ ಅವರೂ ನಾನೇ ಈ ಸ್ಥಾನ ಅಲಂಕರಿಸಬೇಕು ಎಂದು ಮನವಿ ಮಾಡಿದ್ದರು. ಆಡಳಿತ ಪಕ್ಷ ಸೇರಿ ಎಲ್ಲರೂ ನನ್ನನ್ನು ವಿಧಾನಸಭಾಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದರು.

– ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

– ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

– ನಾನು ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುವವನಲ್ಲ.

– ಚುನಾವಣೆ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಸ್ಪೀಕರ್‌ ರಮೇಶ್‌ ಕುಮಾರ್‌ ಭಾಷಣ. ಚುನಾವಣೆ ವ್ಯವಸ್ಥೆ ಬದಲಾಗಬೇಕು ಎಂದು ಇಂಗಿತ.

– ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ಸಮಗ್ರ ಚರ್ಚೆಯಾಗಿ ದೇಶದಲ್ಲಿ ಒಂದು ಉತ್ತಮ ವ್ಯವಸ್ಥೆ ಮೂಡುವ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಲಿ: ಸ್ಪೀಕರ್‌ಸಲಹೆ

12.05ಪೂರಕ ಬಜೆಟ್‌ ವಿಚಾರವಾಗಿ ಆಡಳಿತ ಪಕ್ಷ ವಿಪಕ್ಷಗಳ ನಡುವೆ ವಾಗ್ವಾದ: ಹಣಕಾಸು ವಿಧೇಯಕದಂತೇ ಪೂರಕ ಬಜೆಟ್‌ಗೂ ಅನುಮೋದನೆ ನೀಡುವಂತೆ ಕೋರಿದ ಸಿಎಂ ನಡೆಗೆ ಸಿದ್ದರಾಮಯ್ಯ ಆಕ್ಷೇಪ.ಈ ಬಗ್ಗೆ ಮುಂದಿನ ತಿಂಗಳು ಅಧಿವೇಶನ ಕರೆದು ಚರ್ಚೆ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ.

– ಪೂರಕ ಬಜೆಟ್‌ ಮೇಲೆ ಚರ್ಚೆ ನಡೆಸಿಯೇ ಅಂಗೀಕರಿಸಬೇಕು: ಸಿದ್ದರಾಮಯ್ಯ

ವಿಶೇಷವೆಂಬಂತೆ ಪೂರಕ ಬಜೆಟ್‌ ವಿಚಾರದಲ್ಲಿಮಾಜಿ ಸಚಿವ ಜಿ.ಟಿ.ದೇವೇಗೌಡರಿಂದ ಸರ್ಕಾರದ ಸಮರ್ಥನೆ

12.00– ಹಣಕಾಸು ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರ

11.50ಹಣಕಾಸು ವಿಧೇಯಕವನ್ನು ಯಾವುದೇ ಬದಲಾವಣೆ ಇಲ್ಲದೇ ಮಂಡಿಸಿರುವುದೇನೋ ಸರಿ. ಆದರೆ, ವಿಧೇಯಕ ಚರ್ಚೆಯಾಗದೇ ಅಂಗೀಕಾರವಾಗುವುದು ಸರಿಯಲ್ಲ. ಚರ್ಚೆಯಾಗದೇ ಅಂಗೀಕಾರವಾದರೆ ವಿಧಾನಸಭೆಯ ಪರಂಪರೆಗೆ ಕಪ್ಪು ಚುಕ್ಕೆಯಾಗುತ್ತದೆ.ವಿಧೇಯಕದ ಮೇಲೆ ಚರ್ಚೆ ನಡೆಯಬೇಕು: ಎಚ್‌.ಕೆ ಪಾಟೀಲ್‌

11.50ಹಣಕಾಸು ವಿಧೇಯಕವನ್ನು ಯಾವುದೇ ಬದಲಾವಣೆ ಇಲ್ಲದೇ ಮಂಡಿಸಿರುವುದೇನೋ ಸರಿ. ಆದರೆ, ವಿಧೇಯಕ ಚರ್ಚೆಯಾಗದೇ ಅಂಗೀಕಾರವಾಗುವುದು ಸರಿಯಲ್ಲ. ಚರ್ಚೆಯಾಗದೇ ಅಂಗೀಕಾರವಾದರೆ ವಿಧಾನಸಭೆಯ ಪರಂಪರೆಗೆ ಕಪ್ಪು ಚುಕ್ಕೆಯಾಗುತ್ತದೆ.ವಿಧೇಯಕದ ಮೇಲೆ ಚರ್ಚೆ ನಡೆಯಬೇಕು: ಎಚ್‌.ಕೆ ಪಾಟೀಲ್‌

11.50ಲೇಖಾನುದಾನ ಮೂರು ತಿಂಗಳಿಗೆ ಮಾತ್ರ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆಗೆ ಮಾಜಿ ಸಿಎಂ ವಿರೋಧ: ಮುಂದಿನ 8 ತಿಂಗಳಿಗೂ ಅನ್ವಯ ಮಾಡುವಂತೆ ಒತ್ತಾಯ

11.47– ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

–ಮೈತ್ರಿ ಸರ್ಕಾರದ ಈ ವಿಧೇಯಕದಲ್ಲಿ ಯಾವುದೇ ಬದಲಾವಣೆಯೂ ಇಲ್ಲದೇ ಮಂಡಿಸುತ್ತಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಯಡಿಯೂರಪ್ಪ

– ಮುಂದಿನ ಮೂರು ತಿಂಗಳಿಗೆ ಮಾತ್ರ ಲೇಖಾನುದಾನವನ್ನು ಅಂಗೀಕರಿಸುತ್ತೇವೆ. ಉಳಿದ ಆರು ತಿಂಗಳಿಗೆ ಪ್ರತ್ಯೇಕ ಲೇಖಾನುದಾನ ಮಂಡಿಸುತ್ತೇವೆ.

11.46– ಸಿಎಂ ಯಡಿಯೂರಪ್ಪ ಅವರಿಂದ ವಿಶ್ವಾಮಯಾಚನೆ: ಪ್ರಸ್ತಾವಧ್ವನಿಮತದ ಮೂಲಕ ಅಂಗೀಕಾರ

11.46– ಸಿಎಂ ಯಡಿಯೂರಪ್ಪ ಭಾಷಣ

– ಎಲ್ಲರೂ ಮೆಚ್ಚುವಂತೆ ನಾನು ರಾಜಕಾರಣ ಮಾಡಲಿದ್ದೇನೆ. ನನ್ನಿಂದ ತಪ್ಪಾದರೆ ಎಲ್ಲರೂ ಪ್ರಶ್ನಿಸಬಹುದು. ನಾಡಿನ ಜನರಿಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ವಿಪಕ್ಷಗಳು ದಯಮಾಡಿ ಸಹಕಾರ ನೀಡಬೇಕು.

11.24– ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಭಾಷಣ

– ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬರಲು 14 ತಿಂಗಳಿಂದಲೂ ಅವಿರತ ಶ್ರಮಿಸಿದ್ದಾರೆ ಎಂದು ಎಚ್ಡಿಕೆ ವ್ಯಂಗ್ಯ

– ಮೈತ್ರಿ ಸರ್ಕಾರದಿಂದಾಗಿ ಆಡಳಿತ ಕುಸಿದಿತ್ತು ಎಂಬುದು ಸುಳ್ಳು. ಇದು ಕೇವಲ ಬಾಯಿಚಪಲದ ಮಾತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು.

– ಈ 14 ತಿಂಗಳಲ್ಲಿನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದರ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ಈ ಬಗ್ಗೆ ನಾನು ಯಾರನ್ನೂ ತೃಪ್ತಿಪಡಿಸಬೇಕಿಲ್ಲ.

– ಸಾಲ ಮನ್ನಾಕ್ಕೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ.

– ಮೈತ್ರಿ ಸರ್ಕಾರದ ಆಡಳಿತ ಕುಸಿದಿತ್ತು ಎಂಬುದಕ್ಕೆ ಮುಖ್ಯಮಂತ್ರಿಗಳು ಜನರ ಎದುರು ಮಾಹಿತಿ ಇಡಬೇಕು.

– ಋಣಮುಕ್ತ ಕಾಯ್ದೆ ಮೂಲಕ ಜನರ ಕಷ್ಟ ಪರಿಹರಿಸಲು ನಮ್ಮ ಸರ್ಕಾರ ಪ್ರಯತ್ನ ಮಾಡಿದೆ.

– ತೃಪ್ತರು ಮತ್ತು ಅತೃಪ್ತರು ಅದ್ಯಾವಾಗ ಪಿಶಾಚಿಗಳಾಗುವರೋ ಗೊತ್ತಿಲ್ಲ: ಎಚ್ಡಿಕೆ ವ್ಯಂಗ್ಯ

– ಅತೃಪ್ತರನ್ನು ಅನರ್ಹಗೊಳಿಸಿದ ಸ್ಪೀಕರ್‌ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ನಾಯಕರ ನಡೆಗೆ ಮಾಜಿ ಸಿಎಂ ಎಚ್ಡಿಕೆ ಆಕ್ಷೇಪ

– ಬೋಪಯ್ಯ ಅವರನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಂದ ಬಿಜೆಪಿ ನಾಯಕರು, ಇಂದು ರಮೇಶ್‌ ಕುಮಾರ್‌ ಅವರ ತೀರ್ಮಾನವನ್ನು ಟೀಕಿಸುವುದು ಸರಿಯಲ್ಲ.

11.20ಬಿಜೆಪಿ ಸರ್ಕಾರಕ್ಕೆ ಬಹುಮತವೇ ಇಲ್ಲ. ಅತೃಪ್ತರ ಮೂಲಕ ಸರ್ಕಾರ ರಚನೆ ಮಾಡಿದೆ: ಸಿದ್ದರಾಮಯ್ಯ

–ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರಬೇಕು ಎಂಬುದು ನಮ್ಮ ಆಶಯ. ಆದರೆ, ಅದು ಸಾಧ್ಯವೇ ಇಲ್ಲ. ಈ ಅತೃಪ್ತರನ್ನು ಕಟ್ಟಿಕೊಂಡು ಸ್ಥಿರ ಸರ್ಕಾರ ನೀಡಲು ನಿಮಗೆ ಸಾಧ್ಯವೇ ಎಂದು ಬಿಎಸ್‌ವೈಗೆ ಸಿದ್ದರಾಮಯ್ಯ ಪ್ರಶ್ನೆ

–ಯಡಿಯೂರಪ್ಪ ಅವರು ಹೋರಾಟಗಾರರು. ಆದರೆ, ಜನಾದೇಶದ ಮೂಲಕ ಅವರು ಎಂದೂ ಸಿಎಂ ಆಗಲೇ ಇಲ್ಲ. ಪ್ರತಿ ಬಾರಿಯೂ ಕೊರತೆಯಿಂದಲೇ ಸರ್ಕಾರ ರಚನೆ ಮಾಡಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

–ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುವುದಾಗಿ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಧ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಅದಕ್ಕೂ ಸ್ವಾಗತವಿದೆ.

–ಜನ ಸೇವೆ ಮಾಡಲು ಪ್ರಾಮಾಣಿಕವಾಗಿರಬೇಕು. ನನ್ನ ಅವಧಿಯಲ್ಲಿ ನಾನು ಆ ಪ್ರಯತ್ನ ಮಾಡಿದ್ದೇನೆ. ಕುಮಾರಸ್ವಾಮಿಯವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿತ್ತು ಎಂಬ ಆರೋಪಗಳು ಸುಳ್ಳು. ಮೈತ್ರಿ ಸರ್ಕಾರ ಉತ್ತಮವಾಗಿಯೇ ಕೆಲಸ ಮಾಡುತ್ತಿತ್ತು.

–ಸಾಲಮನ್ನಾ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಮೈತ್ರಿ ಸರ್ಕಾರ 14 ತಿಂಗಳು ಜನ ಮೆಚ್ಚಿದ ರೀತಿಯಲ್ಲಿ ಕೆಲಸ ಮಾಡಿದೆ.

–ನನ್ನ ಕೊನೆ ಬಜೆಟ್‌ನಲ್ಲಿ ರೈತರಿಗೆ 10 ಸಾವಿರ ನೀಡುವ ಕಾರ್ಯಕ್ರಮವನ್ನು ನನ್ನ ಬಜೆಟ್‌ನಲ್ಲೇ ನಾನು ಘೋಷಿಸಿದ್ದೆ. ನೇಕಾರರ ಸಾಲ ಮನ್ನವನ್ನೂ ನನ್ನ ಬಜೆಟ್‌ನಲ್ಲಿ ಘೋಷಿಸಿದ್ದೆ. ಮೈತ್ರಿ ಸರ್ಕಾರವೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿತ್ತು. ಇದರಲ್ಲಿ ಹೊಸದೇನಿಲ್ಲ. ನಮ್ಮದೇ ಕಾರ್ಯಕ್ರಮವನ್ನು ಬಿಎಸ್‌ವೈ ತಮ್ಮ ಮೊದಲ ನಿರ್ಧಾರ ಎಂಬಂತೆ ಪ್ರಕಟಿಸಿದ್ದಾರೆ.

11.12ವಿಧಾನಸಭೆಯಲ್ಲಿ ಹಣಕಾಸು ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

11.09ವಿಧಾನಸೌಧ ಕಲಾಪ ಆರಂಭ: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಂದ ಭಾಷಣ ಆರಂಭ

10.40ವಿಧಾನಸೌಧ ಕಲಾಪಕ್ಕೆ ಕ್ಷಣಗಣನೆ

10.4040 ವರ್ಷಗಳ ರಾಜಕೀಯ ಜೀವನ ಸಾಕಾಗಿದೆ. ರಾಜಕೀಯ ನಿವೃತ್ತಿ ಪಡೆಯುವ ಆಲೋಚನೆಯಲ್ಲಿದ್ದೇನೆ– ಅತೃಪ್ತ ಶಾಸಕ ಎಂಟಿಬಿ ನಾಗರಾಜ್‌

17 ಜನ ಶಾಸಕರನ್ನು ಅನರ್ಹತೆ ಮಾಡಿದ್ದಾರೆ. ನ್ಯಾಯಾಲಯದ ಮೊರೆ ಹೋಗಿದ್ದೇವೆ, ಅಲ್ಲಿನ ಏನು ತೀರ್ಪು ಬರುತ್ತದೆ ಎಂದು ಕಾದು ನೋಡುತ್ತೇವೆ.ಸಿದ್ದರಾಮಯ್ಯ ಅವರೇ ಅಥವಾ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಒತ್ತಾಯ ಮಾಡಿ ಅನರ್ಹತೆ ಮಾಡಿರಬಹುದು. ಪಕ್ಷಕ್ಕೆ ಮೋಸ ಮಾಡಿದ್ದಾರೆ, ಕುದುರೆ ವ್ಯಾಪಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತು. ಹೋಗಿರುವ ಎಲ್ಲಾ ಶಾಸಕರು ಹಣವಂತರು.ಹಣಕ್ಕಾಗಿ ಯಾಕೆ ರಾಜೀನಾಮೆ ಕೊಡುತ್ತೇವೆ. ನಮ್ಮ ಕ್ಷೇತ್ರಕ್ಕೆ ಅನುದಾನ ಹಂಚಿಕೆ, ಅಭಿವೃದ್ಧಿಯಾಗಿಲ್ಲ ಎಂದು ಬೇಸರಗೊಂಡು ರಾಜೀನಾಮೆ ನೀಡಿದ್ದೇವೆ – ಎಂಟಿಬಿ ನಾಗರಾಜ್‌

ನನ್ನ ಮಗನಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಅವನು ನಿಲ್ಲಲ್ಲಿ. ಜನಸೇವೆಯೇ ನನ್ನ ಮೂಲ ಉದ್ದೇಶ. ಇಡಿ, ಆದಾಯ ತೆರಿಗೆಗೆ ನಾನು ಹೆದರುವುದಿಲ್ಲ. ₹20 ಕೋಟಿ ಆದಾಯ ತೆರಿಗೆ ಕಟ್ಟುತ್ತೇನೆ. ₹ 6 ಕೋಟಿ‍ ಪಾಲಿಕೆತೆರಿಗೆ ಕಟ್ಟುತ್ತಿದ್ದೇನೆ.ನನಗೆ ಅದ್ಯಾವುದರ ಭಯವೂ ಇಲ್ಲ.

10.35ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಬಂದಿಳಿದ ಬಿಜೆಪಿ ನಾಯಕರು

10.35ರಾಜಕೀಯ ನಿವೃತ್ತಿ ಪಡೆಯುತ್ತೇನೆ’

ಈ ಎಲ್ಲಾ ರಾಜಕೀಯ ನಾಟಕದಿಂದ ಬೇಸರಗೊಂಡಿದ್ದೇನೆ. ನಮ್ಮ ಕ್ಷೇತ್ರದ ಜನರೊಂದಿಗೆ ಮಾತನಾಡಿ ರಾಜಕೀಯ ನಿವೃತ್ತಿ ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದೇನೆ– ಎಸ್‌.ಟಿ.ಸೋಮಶೇಖರ್

10.15 –ಕೃಷ್ಣ ಬೈರೆಗೌಡ ಸಾಚ ಅಲ್ಲ

ಕೃಷ್ಣಬೈರೆಗೌಡ ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ, ಕಾಂಗ್ರೆಸ್‌ ಪಕ್ಷಕ್ಕೆ ಬಂದವನು. ಅವನೇನು ಸಾಚ ಅಲ್ಲ, ಬಹಳ ಕನ್ನಿಂಗ್ ವ್ಯಕ್ತಿ ಅವನು. ಸದನದಲ್ಲಿ ಕೃಷ್ಣ ಬೈರೆಗೌಡ ಮಾಡಿದಂತೆನಾವ್ಯಾರೂ ಅವನನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಬೆಂಬಲಿಸಿರಲಿಲ್ಲ. ಅವರು ಏನೇನು ಮಾತನಾಡಿದ್ದಾರೆ, ಎಲ್ಲೆಲ್ಲಿ ಸಭೆ ನಡೆಸಿದ್ದಾರೆ ಎನ್ನುವುದರ ಸಂಪೂರ್ಣ ವಿವರ ಬಿಚ್ಚಿಡುತ್ತೇವೆ. ಒಳಗೊಂದು ಹೊರಗೊಂದು ರಾಜಕೀಯವನ್ನು ಅವರು ಮಾಡಿದ್ದಾರೆ– ಅತೃಪ್ತ ಶಾಸಕ ಎಸ್‌.ಟಿ.ಸೋಮಶೇಖರ್

ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರದ ವಿರುದ್ಧ ಅನೇಕ ಮಾಹಿತಿ ನೀಡಿದ್ದೇವೆ, ಮುಖ್ಯಮಂತ್ರಿ ಸಹ ಸರಿಯಾಗಿ ಸ್ಪಂದಿಸಿರಲಿಲ್ಲ. ಕಾಂಗ್ರೆಸ್‌ನ 77 ಶಾಸಕರು ವಿಷ ಕುಡಿಯುತ್ತಿದ್ದಾರೆ. ಜೆಡಿಎಸ್‌ ಶಾಸಕರು ಅಮೃತ ಕುಡಿಯುತ್ತಿದ್ದಾರೆ ಎಂದು ಏಳೆಂಟು ಬಾರಿ ಹೇಳಿದರೂ ಕಾಂಗ್ರೆಸ್‌ ಮುಖಂಡರು ಅದನ್ನು ಬಗೆಹರಿಸುವ ಕೆಲಸ ಮಾಡಲಿಲ್ಲ. ಲೋಕಸಭಾ ಚುನಾವಣೆ ಮುಗಿಲಿ, ಅಲ್ಲಿಯವರೆಗೂ ಸಮಾಧಾನದಿಂದ ಇರಿ, ಆಮೇಲೆ ಬೇರೆ ಆಗೋಣ ಅಂತ ಹೇಳಿದರು ಹೊರತು, ಸಮಸ್ಯೆ ಪರಿಹರಿಸಲಿಲ್ಲ.

10.10ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

10.00ವಿಧಾನಸೌಧ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗ ವಿಧಾನಸೌಧಕ್ಕೆ ಬಂದರು.

09.45ಈಗ ಇನ್ನೊಂದು ಸುತ್ತಿನ ರಾಜಕೀಯ ಅನಿಶ್ಚಿತ ಸ್ಥಿತಿ ಎದುರಾಗುವ ಸಾಧ್ಯತೆ ಇದೆ

09.30ಧನವಿನಿಯೋಗ ಮಸೂದೆಯೂ ಸದನದಲ್ಲಿ ಮಂಡನೆಯಾಗಲಿದ್ದು,ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ಬಜೆಟ್‌ಸಿದ್ಧಪಡಿಸಿದ್ದರಿಂದ ಮೈತ್ರಿಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT