ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ನಿಷ್ಠರಿಗೆ ಮಣೆ; ಬಿಎಸ್‌ವೈಗೆ ಹಿನ್ನಡೆ

ಭಾನುಪ್ರಕಾಶ್‌, ಸುರಾನಾ ಉಪಾಧ್ಯಕ್ಷರು
Last Updated 26 ಸೆಪ್ಟೆಂಬರ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿ ಸಕ್ರಿಯರಾಗಿದ್ದ ಎಂ.ಬಿ.ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್ ಸುರಾನಾ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

‘ನಳಿನ್‌ಕುಮಾರ್‌ ಕಟೀಲ್ ಅಧ್ಯಕ್ಷರಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಒಂದೊಂದೇ ಹೆಜ್ಜೆ ಇಡುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಈ ನೇಮಕ ಮಾಡಲಾಗಿದೆ’ ಎಂಬ ಅಭಿಪ್ರಾಯ ‍ಪಕ್ಷದ ನಾಯಕರಿಂದಲೇ ಕೇಳಿಬರುತ್ತಿದೆ.

‘ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಹಾಕಿದ ಗೆರೆಯನ್ನು ದಾಟದ ನಳಿನ್‌, ಅವರ ಸಲಹೆಯ ಮೇರೆಗೆ ಈ ನೇಮಕ ಮಾಡಿದ್ದಾರೆ. ಅಲ್ಲದೆ, ಬಿಎಸ್‌ವೈ ನಿಷ್ಠರ ಪೈಕಿ ಒಬ್ಬೊಬ್ಬರನ್ನೇ ಆಯ್ದು ಪಕ್ಷದ ಕಚೇರಿ ಜಗನ್ನಾಥ ಭವನದಿಂದ ಹೊರ ಹಾಕಲು ಸಿದ್ಧತೆ ನಡೆಸಿದ್ದಾರೆ’ ಎಂಬ ಮಾತುಗಳೂ ನಾಯಕರದ್ದಾಗಿದೆ.

ಈ ಹಿಂದೆ ‘ರಾಯಣ್ಣ ಬ್ರಿಗೇಡ್‌’ ಕಟ್ಟಿದ್ದಕೆ.ಎಸ್‌.ಈಶ್ವರಪ್ಪ ಅವರು ಯಡಿಯೂರಪ್ಪ ಅವರಿಗೆ ಸಡ್ಡು ಹೊಡೆದಿದ್ದರು. ಭಾನುಪ್ರಕಾಶ್‌ ಮತ್ತು ಸುರಾನಾ ಅವರು ಈಶ್ವರಪ್ಪ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದರು. ಈ ಕಾರಣಕ್ಕೆ ಅವರನ್ನು ಪದಾಧಿಕಾರಿಗಳ ಹುದ್ದೆಯಿಂದ ತೆಗೆಯಲಾಗಿತ್ತು. ಇವರಿಬ್ಬರೂ ಸಂತೋಷ್‌ ಅವರಿಗೆ ಆಪ್ತರು. ಇದೀಗ ನಳಿನ್‌ ಅವರಿಗೇ ತಮ್ಮದೇ ಆದ ತಂಡ ಕಟ್ಟಿಕೊಳ್ಳಲು ನೆರವು ನೀಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ನಳಿನ್‌ ಅಧ್ಯಕ್ಷರಾಗುತ್ತಿದ್ದಂತೆ ಬಿಜೆಪಿ ಕೇಂದ್ರ ಕಚೇರಿ ಕಾರ್ಯಾಲಯ ಕಾರ್ಯದರ್ಶಿಯಾಗಿದ್ದ ಗಣೇಶ್‌ ಯಾಜಿ ಅವರನ್ನು ಮುನ್ಸೂಚನೆ ನೀಡದೇ ಆ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಯಾಜಿ ಸುಮಾರು 40 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್‌.ಕೆ. ಅಡ್ವಾಣಿಯವರಿಗೂ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಗೌರವಯುತ ನಿರ್ಗಮನ ನೀಡಬಹುದಿತ್ತು ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಈ ಹಿಂದೆಕಾರ್ಯಾಲಯ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್‌ ಅವರು ರಾಯಣ್ಣ ಬ್ರಿಗೇಡ್‌ ಪರವಾಗಿ ಪಕ್ಷದ ಕಚೇರಿಯಿಂದ ದೂರವಾಣಿ ಮೂಲಕ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬ ಕಾರಣಕ್ಕೆ ಅಂದಿನ ಅಧ್ಯಕ್ಷ ಯಡಿಯೂರಪ್ಪ ಅವರು ಪ್ರಸಾದ್‌ ಅವರನ್ನು ತೆಗೆದಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT