ಗುರುವಾರ , ನವೆಂಬರ್ 21, 2019
20 °C

ಜೆಡಿಎಸ್‌ನಿಂದ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

Published:
Updated:
Prajavani

ರಾಮನಗರ: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಬುಧವಾರ ತಿಳಿಸಿದ್ದಾರೆ.

ಚನ್ನಪಟ್ಟಣದ ಪುಟ್ಟಣ್ಣ, ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದು, ಅವರ ಸದಸ್ಯತ್ವ 2020ರ ಜೂನ್ ವರೆಗೆ ಇದೆ. ಎಚ್.ಡಿ. ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯದಿಂದ ಅವರು ಕೆಲ ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.

ರಾಮನಗರದಲ್ಲಿ ಈಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪುಟ್ಟಣ್ಣ, ‘ನಾನು ಸೇರಿದಂತೆ ಜೆಡಿಎಸ್‌ನ ಬಹುತೇಕ ಪರಿಷತ್ ಸದಸ್ಯರು ಪಕ್ಷ ತೊರೆಯಲು ಚಿಂತನೆ ನಡೆಸಿದ್ದೇವೆ' ಎಂದು ಹೇಳಿಕೆ ನೀಡಿದ್ದರು.

ಪ್ರತಿಕ್ರಿಯಿಸಿ (+)