ಸುತ್ತೂರನ್ನು ಸುತ್ತುವರೆದಿದೆ ಮಳೆನೀರು: ಹಾಳಾಗಿದೆ ಭತ್ತದ ಪೈರು

7

ಸುತ್ತೂರನ್ನು ಸುತ್ತುವರೆದಿದೆ ಮಳೆನೀರು: ಹಾಳಾಗಿದೆ ಭತ್ತದ ಪೈರು

Published:
Updated:

ಸುತ್ತೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. 

ಮಳೆನೀರಿನಿಂದ ಕಬಿನಿ ಜಲಾಶಯ ತುಂಬಿ ತುಳುಕುತ್ತಿದೆ. ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಹಾಗಾಗಿ ಕಪಿಲಾ ನದಿಯ ಹರಿವು ಅಪಾಯದ ಮಟ್ಟ ತಲುಪಿದೆ. ಸೃಷ್ಟಿಯಾಗಿರುವ ಜಲಪ್ರವಾಹದಲ್ಲಿ ನಂಜನಗೂಡು, ಸುತ್ತೂರು ಸುತ್ತಲಿನ ಪ್ರದೇಶ ಜಲಾವೃತಗೊಂಡಿದೆ.

ಸುತ್ತೂರಿನಲ್ಲಿ 100 ಎಕರೆ ಪ್ರದೇಶ ಜಲಾವೃತಗೊಂಡಿದ್ದು, ನಾಟಿ ಮಾಡಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ. ಎಚ್‌.ಡಿ.ಕೋಟೆಯ ಬಿಚನಹಳ್ಳಿ ಸೇರಿದಂತೆ ನದಿ ತೀರದ ಊರುಗಳ ಹೊಲ–ಗದ್ದೆಗಳಲ್ಲಿ ಹಾಕಿರುವ ಭತ್ತ, ಹತ್ತಿ ಮತ್ತು ತರಕಾರಿ ಬೆಳೆಗಳು ಹಾಳಾಗಿದೆ. 
ಇದನ್ನೂ ಓದಿರಿ...
ರಾಜ್ಯದಲ್ಲಿ ಭಾರಿ ಮಳೆ: ಉಕ್ಕಿ ಹರಿದ ನದಿಗಳು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಹಾಮಳೆ ಮುಂದುವರಿದಿದ್ದು ಮಳೆಯ ಅನಾಹುತಗಳು ಹೆಚ್ಚಾಗುತ್ತಿವೆ. ರಾತ್ರಿ ಸುರಿದ ಮಳೆಗೆ ನದಿ, ಹೊಳ್ಳ– ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ನೂರಾರು ಎಕರೆ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಡೆ ಆಗಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಬಳಿ ಗುಡ್ಡ ಕುಸಿದು ಮಡಿಕೇರಿ– ಮಂಗಳೂರು ನಡುವೆ ರಸ್ತೆ ಸಂಚಾರ ಬಂದ್‌. ಎರಡು ಬದಿಯಲ್ಲಿ ಜೆಸಿಬಿ ಬಳಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿವೆ. ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ. ಕಳೆದ ವಾರವೂ ಇದೇ ಹೆದ್ದಾರಿ ಮಡಿಕೇರಿ ಸಮೀಪವೇ ಕುಸಿದು, ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
 

 


ಸುತ್ತೂರಿನಲ್ಲಿ ನೀರು ನಿಂತ ಪ್ರದೇಶದ ವೈಮಾನಿಕ ನೋಟ


ಸುತ್ತೂರು

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !