ಬುಧವಾರ, ನವೆಂಬರ್ 13, 2019
23 °C

ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ

Published:
Updated:

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಇದೇ 19ರಿಂದ 22ರವರೆಗೆ ಭಾರಿ ಮಳೆಯಾಗಲಿದೆ. 

ಉತ್ತರ ಒಳನಾಡಿನಲ್ಲಿ 19ರಂದು ವ್ಯಾಪಕ ಮಳೆ ಯಾಗಲಿದ್ದು, ಎರಡೂ ಭಾಗಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ಸೆಪ್ಟೆಂಬರ್‌ 20 ಮತ್ತು 21ರಂದು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ
ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.  ಬುಧವಾರ ರಾಯಚೂರಿನಲ್ಲಿ 6 ಸೆಂ.ಮೀ.ಮಳೆಯಾಗಿದೆ. ಕಂಪ್ಲಿ 4, ಆನೇಕಲ್‌, ಗೌರಿಬಿದನೂರು‌ 3, ಕೆಂಭಾವಿ, ಕೊಟ್ಟಿಗೆಹಾರದಲ್ಲಿ ತಲಾ 2 ಸೆಂ.ಮೀ.ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ಉತ್ತಮ ಮಳೆ

ಕಲಬುರ್ಗಿ: ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಬುಧವಾರ ಉತ್ತಮ ಮಳೆಯಾಯಿತು. ಕಲಬುರ್ಗಿ ಜಿಲ್ಲೆಯಲ್ಲಿ ನಸುಕಿನಿಂದಲೇ ಆರಂಭವಾದ ಮಳೆ ಬೆಳಿಗ್ಗೆ 11ರವರೆಗೆ ಸುರಿಯಿತು.

ಚಿತ್ತಾಪುರ, ಚಿಂಚೋಳಿ, ಜೇವರ್ಗಿ, ಸೇಡಂ, ಆಳಂದ, ವಾಡಿ ಮತ್ತು ಶಹಾಬಾದ್‌ನಲ್ಲಿ ಉತ್ತಮ ಮಳೆಯಾಯಿತು.

ರಾಯಚೂರು, ಲಿಂಗಸುಗೂರು, ಮಾನ್ವಿ ಮತ್ತು ದೇವದುರ್ಗದ ಹೋಬಳಿಯಲ್ಲಿ ಬೆಳಿಗ್ಗೆ ಎರಡು ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಕಲಬುರ್ಗಿ ಜಿಲ್ಲೆಯ ನಾಗೂರಲ್ಲಿ 36 ಮಿಲಿ ಮೀಟರ್‌, ಹೆರೂರ (ಕೆ) ಗ್ರಾಮದಲ್ಲಿ 28 ಮಿಲಿ ಮೀಟರ್‌ ಮಳೆ ಸುರಿದಿದೆ.

ಪ್ರತಿಕ್ರಿಯಿಸಿ (+)