ಕರ್ನಾಟಕಕ್ಕೆ ಗಂಡಾಂತರವಾದ ಹೃದಯ ರೋಗ

6
ಸಮೀಕ್ಷೆಯಿಂದ ಬಹಿರಂಗ

ಕರ್ನಾಟಕಕ್ಕೆ ಗಂಡಾಂತರವಾದ ಹೃದಯ ರೋಗ

Published:
Updated:

ನವದೆಹಲಿ: ದಕ್ಷಿಣ ಭಾರತ ರಾಜ್ಯಗಳಲ್ಲಿ ಹೃದಯ ರಕ್ತನಾಳ ಸಂಬಂಧಿ ಕಾಯಿಲೆ (ಕಾರ್ಡಿಯೋ ವ್ಯಾಸ್ಕುಲರ್ ಡಿಸೀಸ್ -ಸಿವಿಡಿ) ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಕರ್ನಾಟಕದಲ್ಲಿ ಶೇ 16ರಷ್ಟು ಜನರು ಹೃದಯಾಘಾತ, ಪಾರ್ಶ್ವವಾಯು ಹಾಗೂ ಸಿವಿಡಿಯಿಂದ ನರಳುತ್ತಿದ್ದಾರೆ ಎಂದು ಈ  ವರದಿ ತಿಳಿಸಿದೆ.

ಕೇರಳ, ಗೋವಾ, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಆದರೆ, ಈ ರಾಜ್ಯಗಳ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು  ಸಿವಿಡಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ತೆಲಂಗಾಣದಲ್ಲಿ ಅಪಾಯದ ಪ್ರಮಾಣ ಕಡಿಮೆ ಇದೆ.

ದಕ್ಷಿಣ ಭಾರತದ ರಾಜ್ಯಗಳ ಜತೆಗೆ ಗೋವಾ, ಹಿಮಾಚಲಪ್ರದೇಶ, ಪಂಜಾಬ್‌, ಉತ್ತರಾಖಂಡ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೆರಿಯ ಪುರುಷರಲ್ಲಿ ಸಿವಿಡಿ ಅಪಾಯ ಮಟ್ಟ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಪ್ಲಾಸ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಸಂಶೋಧಕರು ತಿಳಿಸಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯ 2012 ಮತ್ತು 2014ರ ನಡುವೆ ನಡೆಸಿದ್ದ ಎರಡು ದೊಡ್ಡ ಸಮೀಕ್ಷೆಗಳನ್ನು ಈ ಹೊಸ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಹೃದಯ ಸಂಬಂಧಿ ಸಮಸ್ಯೆಗಳು ಅಪಾಯದ ಮಟ್ಟದಲ್ಲಿರುವ ಚಿತ್ರಣ ಈ ಅಧ್ಯಯನದಲ್ಲಿ ಸಿಕ್ಕಿದೆ.

ಸಮೀಕ್ಷಯಲ್ಲಿ ಕಂಡಿದ್ದು...

* ದೇಶದಲ್ಲಿ ಮೊದಲ ಬಾರಿಗೆ ಜನಸಂಖ್ಯಾವಾರು ಸಿವಿಡಿ ಸಮಸ್ಯೆ ಕುರಿತು ದೊಡ್ಡ ಸಮೀಕ್ಷೆ

*  ಜಾರ್ಖಂಡ್‌– ಸಿವಿಡಿ ಸಮಸ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ರಾಜ್ಯ – ಶೇ 13.2

*  ಕೇರಳ– ಸಿವಿಡಿ ಸಮಸ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯ

*  ದಕ್ಷಿಣ ಭಾರತ, ಈಶಾನ್ಯ ಹಾಗೂ ಉತ್ತರ ಭಾರತದಲ್ಲಿ ಸಿವಿಡಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದೆ

*  ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಮತ್ತು ಮಹಿಳೆಯರಿಗಿಂತ ಪುರುಷರಲ್ಲಿ ಸಿವಿಡಿ ಅಪಾಯ ಹೆಚ್ಚು

*  ಬಡವರಿಗಿಂತ ಶ್ರೀಮಂತರಲ್ಲೇ ಗಣನೀಯ ಪ್ರಮಾಣದಲ್ಲಿದೆ.

*  ಬಡವರಲ್ಲಿ ಮಧ್ಯ ವಯಸ್ಕರು ಮತ್ತು ವಯಸ್ಸಾದವರಲ್ಲಿ ಅಧಿಕ ರಕ್ತದ ಗ್ಲೂಕೋಸ್ ಮತ್ತು ಅಧಿಕ ರಕ್ತದ ಒತ್ತಡ

ಪ್ರಮುಖ ಕಾರಣ

* ಸ್ಥೂಲಕಾಯ
*  ಒತ್ತಡದ ಬದುಕು
* ಜಡ ಜೀವನ ಶೈಲಿ
*  ಸಂಸ್ಕರಿತ ಆಹಾರ ಮತ್ತು ಕರಿದ ಪದಾರ್ಥ ಸೇವನೆ
*  ಧೂಮಪಾನ
* ಮದ್ಯಪಾನ

ಮುನ್ನೆಚ್ಚರಿಕಾ ಕ್ರಮ
* ಚಟುವಟಿಕೆಯುತ ಜೀವನಶೈಲಿ, ವ್ಯಾಯಾಮ
* ಪೌಷ್ಟಿಕ ಆಹಾರ ಸೇವನೆ
* ಕನಿಷ್ಠ 6-7 ಗಂಟೆ ನಿದ್ದೆ
* ಮಾಲಿನ್ಯ ಮುಕ್ತ ಪರಿಸರದಲ್ಲಿ ವಾಸ

ಅಂಕಿಅಂಶ

* ರಾಜ್ಯದಲ್ಲಿ 30ರಿಂದ 74 ವಯೋಮಾನದ ಶೇ 16 ಜನರಿಗೆ ಹೃದಯಾಘಾತ, ಪಾರ್ಶ್ವವಾಯು, ಸಿವಿಡಿ ಇದೆ

* ನಗರ ಪ್ರದೇಶದ ಶೇ 18ರಷ್ಟು ವಯಸ್ಕರಿಗೆ ಈ ಸಮಸ್ಯೆ ಇದೆ

* ಗ್ರಾಮೀಣ ಪ್ರದೇಶದಲ್ಲಿ ಶೇ 16 ಜನರಲ್ಲಿ ಈ ಸಮಸ್ಯೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !