4

30ರಂದು ಕರ್ನಾಟಕ ಸಂಘ ಪುಸ್ತಕ ಬಹುಮಾನ ಪ್ರದಾನ

Published:
Updated:

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜೂನ್‌ 30ರಂದು 2017ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಕವಿ ಸಿದ್ದಲಿಂಗಯ್ಯ ಬಹುಮಾನ ವಿತರಿಸಲಿದ್ದಾರೆ.

ಶ್ರೀಧರ ಬನವಾಸಿ (ಫಕೀರ) ಅವರ ‘ಬೇರು’ ಕಾದಂಬರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ (ಕಾದಂಬರಿ), ಎಂ. ಎಸ್. ರಘುನಾಥ್‌ ಅವರ ‘ನೆರಳಿನ ರೇಖೆಗಳು’ ಕೃತಿಗೆ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ (ಅನುವಾದಿತ ಕೃತಿ), ಅಮೃತಾ ರಕ್ಷಿದಿ ಅವರ ‘ಅಮೃತ ಯಾನ‘ಕ್ಕೆ  ಎಂ. ಕೆ. ಇಂದಿರಾ ಪ್ರಶಸ್ತಿ (ಲೇಖಕಿಯ ವಿಭಾಗ), ಆರಿಫ್ ರಾಜಾ ಅವರ ‘ನಕ್ಷತ್ರ ಮೋಹ’ ಕೃತಿಗೆ ಪಿ. ಲಂಕೇಶ್ ಪ್ರಶಸ್ತಿ (ಮುಸ್ಲಿಂ ಲೇಖಕ), ಪೂರ್ಣಿಮಾ ಸುರೇಶ್‌ ಅವರ ‘ಅಕ್ಕನಂತೊಬ್ಬಳು ಅನುರಕ್ತೆ’ ಕೃತಿಗೆ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ (ಕವನ ಸಂಕಲನ), ಡಿ.ಎಸ್. ರಾಮಸ್ವಾಮಿ ಅವರ ‘ಅನುಸಂಧಾನ’ ಕೃತಿಗೆ ಡಾ.ಹಾ.ಮಾ. ನಾಯಕ ಪ್ರಶಸ್ತಿ (ಅಂಕಣ ಬರಹ), ಕನಕರಾಜ್ ಆರನಕಟ್ಟೆ ಅವರ ‘ಸಿಲೋನ್ ಸೈಕಲ್’ ಕೃತಿಗೆ ಡಾ.ಯು.ಆರ್. ಅನಂತಮೂರ್ತಿ ಪ್ರಶಸ್ತಿ (ಸಣ್ಣ ಕಥಾ ಸಂಕಲನ) ನೀಡಿ ಗೌರವಿಸಲಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್. ನಾಗಭೂಷಣ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಸಂಘದ ಗೌರವ ಸದಸ್ಯರ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಸಾಹಿತ್ಯ ಪ್ರಕಾರಗಳ ಅತ್ಯುತ್ತಮ ಕೃತಿಗಳಿಗೆ ಈ ಬಹುಮಾನ ನೀಡಲಾಗುತ್ತಿದೆ. ಬಹುಮಾನಗಳು ತಲಾ ₹ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !