ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್) ಮತ್ತು ಪ್ಯಾನ್ ಪಡೆಯಲು ಆಧಾರ್ ಸಂಖ್ಯೆ ಉಲ್ಲೇಖಿಸುವುದನ್ನು ಸರ್ಕಾರ ಈಗ ಕಡ್ಡಾಯ ಮಾಡಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ (2) ಪ್ರಕಾರ, 2017ರ ಜುಲೈ 1ರಂದು ಪ್ಯಾನ್ ಹೊಂದಿದವರು ಮತ್ತು ಆಧಾರ್ ಪಡೆಯಲು ಅರ್ಹರಾಗಿದ್ದರೆ, ತಮ್ಮ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ.