ಶನಿವಾರ, ಫೆಬ್ರವರಿ 4, 2023
18 °C

Solar Eclipse: ರಾಜ್ಯದ ಹಲವೆಡೆ ಕಂಕಣ ಸೂರ್ಯಗ್ರಹಣ ಗೋಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ, ಮಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ  ಹಲವೆಡೆ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. 

ಇಂದು (ಭಾನುವಾರ) ಬೆಳಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಸೂರ್ಯ ಒಂದು ಬಳೆಯಂತೆ ಕಾಣುವ ಸೌರ ವಿದ್ಯಮಾನ ಇದಾಗಿದ್ದು, ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲ ಭಾಗಗಳಲ್ಲಷ್ಟೇ ಪೂರ್ಣ ಪ್ರಮಾಣದ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.

ಶೇಕಡ 40ರಷ್ಟು 11.47ರ ವೇಳೆಗೆ ಕಾಣಿಸಿಕೊಳ್ಳಲಿದ್ದು, ಬರಿಗಣ್ಣಿನಿಂದ ಇದನ್ನು ವೀಕ್ಷಿಸುವುದು ಅಪಾಯಕಾರಿ. ಗ್ರಹಣ ವೀಕ್ಷಣೆಗೆ ಎಂದೇ ತಯಾರಿಸಲಾಗಿರುವ ವಿಶೇಷ ಕನ್ನಡಕಗಳನ್ನು ಬಳಸಿ ಇದನ್ನು ನೋಡಬೇಕು ಎಂದು ಬೆಂಗಳೂರಿನ ಜವಾಹರಲಾಲ್‌ ನೆಹರೂ ತಾರಾಲಯ ತಿಳಿಸಿದೆ.

ಇದನ್ನೂ ಓದಿ... Solar Eclipse: ಕಂಕಣ ಸೂರ್ಯಗ್ರಹಣ ಎಷ್ಟು ಹೊತ್ತಿಗೆ, ನೋಡುವುದು ಹೇಗೆ?

ಗ್ರಹಣ ಪರೀಕ್ಷೆಗೆ ಒನಕೆ ಬಳಕೆ 
ಚಿಂಚೋಳಿ (ಕಲಬುರ್ಗಿ ಜಿಲ್ಲೆ):
ಗ್ರಾಮೀಣ ಜನರು ಸೂರ್ಯ ಗ್ರಹಣ ಪತ್ತೆಗೆ ತಮ್ಮದೇ ವಿಧಾನ ಅನುಸರಿಸುತ್ತಾ ಬಂದಿದ್ದಾರೆ. ಬುಟ್ಟಿ ಅಥವಾ ಪಾತ್ರೆ ಹಾಗೂ ಪ್ಲೇಟನಲ್ಲೀ ನೀರು ಹಾಕಿ ಅದರಲ್ಲಿ ಒನಕೆ ನಿಲ್ಲಿಸಲಾಗುತ್ತದೆ.

ಒನಕೆ ನೇರವಾಗಿ ನಿಂತರೆ ಗ್ರಹಣ ಹಿಡಿದಿರುವುದು ಖಾತ್ರಿ. ಆದರೆ ಅದು ನಿಲ್ಲದಿದ್ದರೆ ಒನಕೆ ನಿಲ್ಲುವುದಿಲ್ಲ ಎಂಬ ನಂಬಿಕೆ ನಮ್ಮ ಜನರಲ್ಲಿದೆ ಎಂದು ಗಡಿಕೇಶ್ವಾರ ಗ್ರಾಮದ ಮುಖಂಡ ವೀರೇಶ ಬೆಳಕೇರಿ ಹಾಗೂ ಮಾಳಪ್ಪ ಅಪ್ಪೋಜಿ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಂಕಣ ಸೂರ್ಯಗ್ರಹಣ ಆರಂಭವಾಗುತ್ತಲೇ ಹಳ್ಳಿಗಳಲ್ಲಿ ಒನಕೆ ಬಳಸಿ ಗ್ರಹಣ ಹಿಡಿದಿರುವುದು ಖಾತ್ರಿ ಪಡಿಸಿಕೊಂಡರು.


ಸೂರ್ಯ ಗ್ರಹಣದ ಸಂದರ್ಭದಲ್ಲಿ ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿ ಸ್ಥಳೀಯರು ಕಂಚಿನ ತಟ್ಟೆಯಲ್ಲಿ ನೀರು ಹಾಕಿ, ಅದರಲ್ಲಿ ಒನಕೆ‌ ನಿಲ್ಲಿಸಿರುವುದು. ಗ್ರಹಣ ಆರಂಭದ ನಂತರ ಒನಕೆ ನಿಲ್ಲುತ್ತದೆ. ಗ್ರಹಣ ಮುಕ್ತಾಯವಾದಾಗ ಒನಕೆ ತನ್ನಿಂತಾನೆ ಬೀಳುತ್ತದೆ ಎಂಬ ನಂಬಿಕೆ ಜನರದ್ದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು