ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಬಡವರಿಗೆ, ಕೃಷಿಕರಿಗೆ ಏನೇನು?

ಬೆಂಗಳೂರಿನಲ್ಲಿ ಬಡವರಿಗೆ ಮನೆ ನಿರ್ಮಾಣದ ಘೋಷಣೆ
Last Updated 5 ಜುಲೈ 2018, 7:41 IST
ಅಕ್ಷರ ಗಾತ್ರ

ಬೆಂಗಳೂರು: ಚೊಚ್ಚಲ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೃಷಿಕರಿಗೆ ಮತ್ತು ಬಡವರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಒಂದು ಕಿಲೋ ಪಾಮ್‌ ಎಣ್ಣೆ ಮತ್ತು ರಿಯಾಯಿತಿ ದರದಲ್ಲಿ ಅರ್ಧ ಕಿಲೋ ತೊಗರಿ ಬೆಳೆ ನೀಡುವುದಾಗಿ ಘೊಷಿಸಿದ್ದಾರೆ.

ಇನ್ನಷ್ಟು ಯೋಜನೆಗಳು

* ಬಿಪಿಎಲ್‌ ಕಾರ್ಡುದಾರರಿಗೆ 1 ಕಿಲೋ ಅಯೋಡಿನ್‌ ಉಪ್ಪು ಮತ್ತು 1 ಕಿಲೋ ಸಕ್ಕರೆ

* ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆ ಎಲ್ಲಾ ನಗರಗಳಿಗೆ ವಿಸ್ತರಣೆ

* ಬೆಂಗಳೂರಿನಲ್ಲಿ ಬಡವರಿಗೆ ಮನೆ ನಿರ್ಮಾಣ

* ಇಂದಿರಾ ಕ್ಯಾಂಟೀನ್‌ ಯೋಜನೆ ಮುಂದುವರಿಕೆ:ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 247 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ನಿರ್ಧಾರ

* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ₹4000 ಕೋಟಿ ಅನುದಾನ

* ತೆಂಗು ಬೆಳೆಗಾರರ ಅಭಿವೃದ್ಧಿಗೆ ₹900 ಕೋಟಿ ರೂಪಾಯಿ ಮೀಸಲು

* ಕೃಷಿ ಇಲಾಖೆಗೆ ₹8000 ಕೋಟಿ ಅನುದಾನ

* ನೀರಾವರಿ ಯೋಜನೆಗಳಿಗೆ ₹18 ಸಾವಿರ ಕೋಟಿ

* ಸಿಎಂ ಮಾತೃಶ್ರೀ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಗರ್ಭಿಣಿಯರಿಗೆ ಮಾಸಿಕ ₹1,000 ಅನುದಾನ

*ವಿವಿಧ ಅಭಿವೃದ್ಧಿ ನಿಗಮಗಳಿಂದ ಅಂಗವಿಕಲರು ಪಡೆದಿರುವ ಸಾಲ ಮನ್ನಾ

*ವೃದ್ಧಾಪ್ಯ ವೇತನ ₹600ರಿಂದ ₹1000ಕ್ಕೆ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT