ನದಿ ಜೋಡಣೆ; ಪ್ರಧಾನಿ ಭೇಟಿಗೆ ದೆಹಲಿಗೆ ತೆರಳಿದ ಸ್ವಾಮೀಜಿಗಳ ನಿಯೋಗ

ಸೋಮವಾರ, ಜೂಲೈ 15, 2019
25 °C

ನದಿ ಜೋಡಣೆ; ಪ್ರಧಾನಿ ಭೇಟಿಗೆ ದೆಹಲಿಗೆ ತೆರಳಿದ ಸ್ವಾಮೀಜಿಗಳ ನಿಯೋಗ

Published:
Updated:

ಹುಬ್ಬಳ್ಳಿ: ಕಾಳಿ - ಮಲಪ್ರಭಾ ನದಿ ಹಾಗೂ ಕೃಷ್ಣಾ - ಘಟಪ್ರಭಾ ನದಿ ಜೋಡಣೆ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲು ಉತ್ತರ ಕರ್ನಾಟಕದ ಪ್ರಮುಖ ಸ್ವಾಮೀಜಿಗಳು ಇಲ್ಲಿನ ವಿಮಾನ ನಿಲ್ದಾಣದ ಮೂಲಕ ಬುಧವಾರ ದೆಹಲಿಗೆ ತೆರಳಿದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ , ವಾಲ್ಮೀಕಿ ಪೀಠದ ಪ್ರಸನ್ನ ನಂದಪುರಿ ಸ್ವಾಮೀಜಿ , ಉಪ್ಪಾರ  ಭಗೀರಥ ಪೀಠದ ಪುರುಷೋತ್ತಮ ಸ್ವಾಮೀಜಿ, ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಪೀಠದ  ಶಾಂತ ವೀರ ಸ್ವಾಮೀಜಿ, ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮೀಜಿ ತೆರಳಿದರು. ನಾಳೆ ಬೆಳಿಗ್ಗೆ 11.20ಕ್ಕೆ ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ.

ಶಾಸಕ ಮುರುಗೇಶ್ ನಿರಾಣಿಯವರ ಮನವಿ ಮೇರೆಗೆ ವಿವಿಧ ಸಮುದಾಯದ ಸ್ವಾಮೀಜಿಗಳು ದೆಹಲಿಗೆ ತೆರಳಿದರು.

 ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಸಂಚಾಲಕ   ಅಮೃತ ಇಜಾರಿ ಹಸಿರು ಶಾಲು ತೊಡಿಸಿ ಸ್ವಾಮೀಜಿಗಳನ್ನು ಬೀಳ್ಕೊಟ್ಟರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !