ಕರ್ನಾಟಕ ವಿವಿ ಕುಲಸಚಿವ ಬದಲು

7
ಲೈಂಗಿಕ ಕಿರುಕುಳ, ಕೃತಿಚೌರ್ಯ ಆರೋಪ

ಕರ್ನಾಟಕ ವಿವಿ ಕುಲಸಚಿವ ಬದಲು

Published:
Updated:

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರನ್ನು ಬದಲಾಯಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಲೈಂಗಿಕ ಕಿರುಕುಳ ಹಾಗೂ ಕೃತಿಚೌರ್ಯ ಆರೋಪ ಎದುರಿಸುತ್ತಿರುವ ಪ್ರೊ.ಕಲ್ಲಪ್ಪ ಹೊಸಮನಿ ಅವರನ್ನು ಬದಲಾಯಿಸಿದ್ದು, ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸುವಂತೆ ಕುಲಪತಿಗೆ ಸೂಚಿಸಲಾಗಿದೆ.

ಹೊಸಮನಿ ಅವರನ್ನು ರಸಾಯನವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಮರಳಿ ಕಳುಹಿಸುವಂತೆ ತಿಳಿಸಲಾಗಿದೆ. ಜತೆಗೆ, ಸರ್ಕಾರದಿಂದ ಮುಂದಿನ ನೇಮಕಾತಿ ಆಗುವವರೆಗೂ ಮನೋವಿಜ್ಞಾನ ವಿಭಾಗದ ಪ್ರೊ. ವಿಜಯಲಕ್ಷ್ಮಿ ಅಮ್ಮಿನಭಾವಿ ಅವರನ್ನು ಹಂಗಾಮಿ ಕುಲಸಚಿವರನ್ನಾಗಿ ನೇಮಿಸಬೇಕೆಂದು ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !