ಮಂಗಳವಾರ, ಅಕ್ಟೋಬರ್ 15, 2019
29 °C
ಕಾರವಾರ

ಸೀಬರ್ಡ್ ನೌಕಾನೆಲೆಗೆ ನುಸುಳಲು ಯತ್ನಿಸಿದ ವಿದೇಶಿಗನ ಬಂಧನ

Published:
Updated:

ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯನ್ನು ಪ್ರವೇಶಿಸಲು ಪ್ರಯತ್ನಿಸಿದ ಸ್ವೀಡನ್ ಪ್ರಜೆಯನ್ನು ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

ಸ್ವೆನ್ ಅಲೆಕ್ಸಾಂಡರ್ ಸೆಗೆರ್ (27) ಬಂಧಿತ ವ್ಯಕ್ತಿ. ಸೆ.18ಕ್ಕೆ ಭಾರತಕ್ಕೆ ಬಂದಿದ್ದ ಅವರು, ಕಡಲತೀರದಲ್ಲಿ ಯೋಗಾಭ್ಯಾಸ ಮಾಡಲೆಂದು ಗೋವಾಕ್ಕೆ ಭೇಟಿ ನೀಡಿದ್ದರು. ಬಳಿಕ ಕಡಲ ಕಿನಾರೆಯಲ್ಲೇ ನಡೆದುಕೊಂಡು ಬಂದು, ದಕ್ಷಿಣದಲ್ಲಿರುವ ಕಾರವಾರಕ್ಕೆ ಶುಕ್ರವಾರ ತಲುಪಿದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಕಾಮತ್ ಬೀಚ್ ಬಳಿ ಹೋಗಲು ಯತ್ನಿಸುತ್ತಿದ್ದಾಗ ನೌಕಾಪಡೆಯ ಸಿಬ್ಬಂದಿ ಪತ್ತೆ ಹಚ್ಚಿದರು. ಕೂಡಲೇ ತ್ವರಿತ ಪ್ರತಿಕ್ರಿಯೆ ತಂಡದವರು ಅವರನ್ನು ಬಂಧಿಸಿದರು. ಈ ಬಗ್ಗೆ ಗುಪ್ತಚರ ದಳ ಮತ್ತು ಕಾರವಾರದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Post Comments (+)