ಭಾನುವಾರ, ಡಿಸೆಂಬರ್ 8, 2019
21 °C

ಯೋಧ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ಸಮೀಪದ ಮೇಲಿನ ಮಖೇರಿಯ ನಿವಾಸಿ, ಬಿಎಸ್‌ಎಫ್ ಯೋಧ ದುಮಿಂಗ್ ಮೋತೇಶ ಸಿದ್ದಿ (39) ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಸೋಮವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಕಿರಿಯ ಪುತ್ರನ ಜನ್ಮದಿನ ಹಾಗೂ ಮನೆಯ ಗೃಹ ಪ್ರವೇಶದ ಸಲುವಾಗಿ ಅವರು ರಜೆಯ ಮೇಲೆ ಹೊರಟಿದ್ದರು. ತಾವು ಬರುತ್ತಿರುವುದಾಗಿ ಶನಿವಾರವೇ ಪತ್ನಿ ಲೀನಾ ಅವರಿಗೆ ಕರೆ ಮಾಡಿ ತಿಳಿಸಿದ್ದ ಅವರು, ರೈಲಿನಲ್ಲಿ ಸೋಮವಾರ ಹೊರಟು ಬುಧವಾರ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ಸೋಮವಾರ ಅವರ ಸಂಬಂಧಿಕರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ದುಮಿಂಗ್ ಮೃತಪಟ್ಟಿದ್ದು, ರೈಲಿನ ಕೆಳಗೆ ಶವ ಸಿಕ್ಕಿರುವುದಾಗಿ ಮಾಹಿತಿ ನೀಡಿದರು. 

ಅವರ ಶವವನ್ನು ಮಥುರಾದ ಸೇನಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ನಗರಕ್ಕೆ ತರುವ ಪ್ರಕ್ರಿಯೆ ಜಾರಿಯಲ್ಲಿದೆ. ಅವರ ಕುಟುಂಬದೊಂದಿಗೆ ಸೈನಿಕ ಕಲ್ಯಾಣ ಮಂಡಳಿ ಸಂಪರ್ಕದಲ್ಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು