ಪದೋನ್ನತಿಗೆ ಕೆಎಎಸ್‌ ಅಧಿಕಾರಿಗಳ ಆಗ್ರಹ

7

ಪದೋನ್ನತಿಗೆ ಕೆಎಎಸ್‌ ಅಧಿಕಾರಿಗಳ ಆಗ್ರಹ

Published:
Updated:

ಬೆಂಗಳೂರು: ಕೆಎಎಸ್‌ನಿಂದ ಐಎಎಸ್‌ಗೆ ಪದೋನ್ನತಿ ನೀಡುವ ಪ್ರಸ್ತಾವನೆಯನ್ನು ಕೂಡಲೇ ಕೇಂದ್ರ ಸರ್ಕಾರ ಮತ್ತು ಯುಪಿಎಸ್‌ಸಿಗೆ ಕಳುಹಿಸಬೇಕು ಎಂದು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದೆ. 

ಬಹಳ ಕಾಲದಿಂದ ಪದೋನ್ನತಿ ಹೊಂದದಿರುವ ಅಧಿಕಾರಿಗಳು ಈ ಸಂಬಂಧ ಸಂಘಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಜಯವಿಭವ ಸ್ವಾಮಿ ಮನವಿಯಲ್ಲಿ ತಿಳಿಸಿದ್ದಾರೆ.

ಕೆಎಎಸ್‌ನಿಂದ ಐಎಎಸ್‌ಗೆ ಪದೋನ್ನತಿಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಈವರೆಗೂ ಕಳುಹಿಸಿಲ್ಲ. ಹಿರಿಯ ಶ್ರೇಣಿಯಿಂದ ಆಯ್ಕೆ ಶ್ರೇಣಿಗೆ ಪದೋನ್ನತಿ ಹೊಂದಲು ಸುಮಾರು 38 ಅಧಿಕಾರಿಗಳು ಅರ್ಹರಿದ್ದಾರೆ. ಇದಕ್ಕೆ ಬಿ.ಕೆ. ಪವಿತ್ರ ಪ್ರಕರಣ ಅಡ್ಡ ಬರುತ್ತದೆ ಎಂದು ತಿಳಿಸಿ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !