ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ನಡಿ ಬಿದ್ದು ಗೋವು ಕಳ್ಳಸಾಗಣೆದಾರ ಸಾವು

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜೈಪುರ: ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಜಾನುವಾರು ಕಳ್ಳಸಾಗಣೆದಾರನೊಬ್ಬ ತಾನು ಓಡಿಸುತ್ತಿದ್ದ ಟ್ರಕ್‌ನಿಂದ ಜಿಗಿದು, ಅದರ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ರಾಜಸ್ಥಾನದ ಆಲ್ವಾರ್‌ನಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಹರಿಯಾಣದ ಎಯಾಸ್ ಮೊಹಮದ್ ಎಂದು ಗುರುತಿಸಲಾಗಿದೆ.

ಟ್ರಕ್‌ನಲ್ಲಿದ್ದ 23 ಜಾನುವಾರುಗಳ ಪೈಕಿ 5 ಮೃತಪಟ್ಟಿವೆ. ಉಳಿದವನ್ನು ಗೋವು ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ರೇಣಿ ಪೊಲೀಸ್ ಠಾಣೆಯ ಬನ್ವಾರಿಲಾಲ್ ಅವರು ತಿಳಿಸಿದ್ದಾರೆ. ತಪ್ಪಿಸಿಕೊಂಡಿರುವ ಉಳಿದ ಗೋವು ಕಳ್ಳಸಾಗಣೆದಾರರಿಗಾಗಿ ಹುಡುಕಾಟ ನಡೆದಿದೆ.

ತಿದ್ದುಪಡಿ ಮಸೂದೆ: ಗೋವು ಕಳ್ಳಸಾಗಣೆಗೆ ಬಳಸಿದ ವಾಹನಗಳನ್ನು ಜಪ್ತಿ ಮಾಡುವುದು ಹಾಗೂ ಆರೋಪಿಗಳನ್ನು ಬಂಧಿಸುವ ಅಧಿಕಾರ ನೀಡುವ ತಿದ್ದುಪಡಿ ಮಸೂದೆ ಜಾರಿಗೆ ರಾಜಸ್ಥಾನ ಸರ್ಕಾರ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT