ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ರನ್‌ವೇ ನಾಳೆಯಿಂದ ಸೇವೆಗೆ

ಹಳೇ ರನ್‌ವೇ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲೇ ಆರಂಭ
Last Updated 3 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್‌ವೇ ನಾಳೆಯಿಂದಲೇ (ಡಿ. 5) ಸೇವೆಗೆ ಲಭ್ಯವಾಗಲಿದೆ. ಅದರ ಜೊತೆಗೆಯೇ ಸದ್ಯದ ರನ್‌ವೇ ಮೇಲ್ದರ್ಜೆಗೇರಿಸುವ ಕಾಮಗಾರಿ ಶುರುವಾಗಲಿದ್ದು, ಎರಡೂ ರನ್‌ವೇಗಳ ಪ್ರಯೋಜನ ಪಡೆಯಬೇಕಾದರೆ ಮುಂದಿನ 10 ತಿಂಗಳು ಕಾಯಬೇಕು.

ನಿಲ್ದಾಣದ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಮಾನಗಳ ದಟ್ಟಣೆಯಿಂದಾಗಿ ಹಾರಾಟದ ಸಮಯದಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಮಂಜು ಕವಿದ ವಾತಾವರಣವಿದ್ದ ಸಂದರ್ಭದಲ್ಲಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ತೊಂದರೆ ಉಂಟಾಗುತ್ತಿತ್ತು.

ಇದೀಗ ಹೊಸದಾಗಿ 4 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿರುವ ಎರಡನೇ ರನ್‌ವೇ ನಿರ್ಮಿಸಲಾಗಿದ್ದು, ಇದು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್‌ ನಿಗದಿತ ಸಮಯಕ್ಕೆ ಆಗಲು ಹೊಸ ರನ್‌ವೇ ಅನುಕೂಲವಾಗಲಿದೆ.

‘ಪ್ರಯಾಣಿಕರ ದಟ್ಟಣೆ ಜೊತೆಯಲ್ಲಿ ವಿಮಾನಗಳ ದಟ್ಟಣೆಯೂ ಹೆಚ್ಚುತ್ತಿದೆ. ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ವಿಮಾನಗಳ ಸಂಖ್ಯೆಯೂ ಅಧಿಕವಾಗಿದೆ. ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಲು ಹೊಸ ರನ್‌ವೇ ನಿರ್ಮಿಸಲಾಗಿದೆ’ ಎಂದು ನಿಲ್ದಾಣದ ಪ್ರತಿನಿಧಿಯೊಬ್ಬರು ಹೇಳಿದರು.

‘ಎರಡನೇ ರನ್‌ವೇಯಲ್ಲಿ ಕಳೆದ ತಿಂಗಳು ಸ್ಪೈಸ್‌ಜೆಟ್, ಇಂಡಿಗೊ ಹಾಗೂ ಏರ್‌ಏಷಿಯಾ ವಿಮಾನಗಳ ಪ್ರಾಯೋಗಿಕ ಹಾರಾಟ ನಡೆಸಲಾಗಿತ್ತು. ಅದು ಯಶಸ್ವಿಯೂ ಆಗಿದೆ. ಆರಂಭದಲ್ಲಿ ನಿಯಮಿತ ವಿಮಾನಗಳ ಹಾರಾಟಕ್ಕೆ ಮಾತ್ರ ರನ್‌ವೇ ಮೀಸಲಿಡಲಾಗುತ್ತಿದೆ. ಸದ್ಯದ ರನ್‌ವೇ ಮೇಲ್ದರ್ಜೇಗೇರಿಸುವ ಕಾಮಗಾರಿ ಶುರುವಾದ ಬಳಿಕ ಎಲ್ಲ ವಿಮಾನಗಳ ಹಾರಾಟಕ್ಕೂ ಎರಡನೇ ರನ್‌ವೇ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಮಂಜು ಕವಿದ ವಾತಾವರಣದಲ್ಲೂ ಹಾರಾಟ: ‘ಎರಡನೇ ರನ್‌ವೇಯಲ್ಲಿಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್‌ ಸಿಸ್ಟಂ (ಐಎಲ್‌ಎಸ್‌) ಸೌಕರ್ಯ ಅಳವಡಿಸಲಾಗಿದೆ. ಮಂಜು ಕವಿದ ವಾತಾವರಣ ಹಾಗೂ ಮಂದ ಬೆಳಕಿನ ಸಂದರ್ಭದಲ್ಲಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ ನಿಗದಿತ ಸಮಯಕ್ಕೆ ಆಗಲಿದೆ’ ಎಂದು ಪ್ರತಿನಿಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT