ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆ ಮಾಡಿದ ಕೈಗಾದ ಮೊದಲ ಘಟಕ

Last Updated 24 ಅಕ್ಟೋಬರ್ 2018, 10:29 IST
ಅಕ್ಷರ ಗಾತ್ರ

ಕಾರವಾರ:ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 894 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ. ಕೆನಡಾದ ಒಂಟಾರಿಯಾದ ಪಿಕರಿಂಗ್‌ನಲ್ಲಿರುವಅಣು ವಿದ್ಯುತ್ ಸ್ಥಾವರದ ಘಟಕವೊಂದರ ದಾಖಲೆಯನ್ನು ಬುಧವಾರ ಸರಿಗಟ್ಟಿದೆ.

ಈಮೂಲಕ ಭಾರ ಜಲ ರಿಯಾಕ್ಟರ್ (Heavy Pressurised Water Reactor) ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.

ಅತಿ ಹೆಚ್ಚು ದಿನ ನಿರಂತರ ಕಾರ್ಯ ನಿರ್ವಹಿಸಿದ ಎಲ್ಲ ಮಾದರಿಗಳ ರಿಯಾಕ್ಟರ್‌ಗಳಪೈಕಿ ಕೈಗಾದ ಮೊದಲ ಘಟಕವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೂ46 ದಿನಗಳ ಕಾರ್ಯ ನಿರ್ವಹಣೆಮಾಡಿದರೆ 941 ದಿನ ಪೂರೈಸಲಿದ್ದು, ಇಂಗ್ಲೆಂಡ್‌ನ ಹೇಶಮ್ (940 ದಿನ) ಅಣು ವಿದ್ಯುತ್ ಉತ್ಪಾದನಾ ಘಟಕದ ದಾಖಲೆಯನ್ನು ಅಳಿಸಿ ಹಾಕಲಿದೆ.

‘ಈ ಹಿಂದೆ ಪರಿಶೀಲನೆ ನಡೆಸಿದ್ದ ಭಾರತೀಯ ಪರಮಾಣು ಪ್ರಾಧಿಕಾರದಅಧಿಕಾರಿಗಳುಘಟಕವು ಸುಸ್ಥಿತಿಯಲ್ಲಿ ಇರುವುದನ್ನು ದೃಢೀಕರಿಸಿದ್ದರು. ಅದರಂತೆನ.15ರವರೆಗೆ ಚಲನೆಯಲ್ಲಿಡಲು ಅನುಮತಿ ನೀಡಿದ್ದರು.ಅಂದಿಗೆಈ ಘಟಕವು 916 ದಿನಗಳನ್ನು ಪೂರೈಸಲಿದೆ. ಆಗ ನಾವು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳುಪುನಃ ಪರಿಶೀಲನೆ ನಡೆಸಿರಿಯಾಕ್ಟರ್‌ ಅನ್ನು ಚಾಲನೆಯಲ್ಲಿಡಲು ಅನುಮತಿ ನೀಡಬಹುದು ಅಥವಾ ನಿರಾಕರಿಸಬಹುದು. ಈ ಘಟಕವು ಸುಸ್ಥಿತಿಯಲ್ಲಿ ಇರುವ ಕಾರಣ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಸಾರ್ವಜನಿಕ ಜಾಗೃತಿ ಅಧಿಕಾರಿ ಶೇಷಯ್ಯ ‘ಪ್ರಜಾವಾಣಿ’ ಜತೆ ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT