ಸಿದ್ದರಾಮಯ್ಯಗೆ ಸಾರಥಿಯಾದ ಖಾದರ್‌

ಶುಕ್ರವಾರ, ಮಾರ್ಚ್ 22, 2019
27 °C
ಚುನಾವಣೆ ನೀತಿ ಸಂಹಿತೆ ಜಾರಿ

ಸಿದ್ದರಾಮಯ್ಯಗೆ ಸಾರಥಿಯಾದ ಖಾದರ್‌

Published:
Updated:
Prajavani

ಉಡುಪಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಸಮಾವೇಶಕ್ಕೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಮರಳುವ ಸಂದರ್ಭದಲ್ಲಿ ಸರ್ಕಾರಿ ಕಾರನ್ನು ಬಿಟ್ಟು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರ ಕಾರಿನಲ್ಲಿ ತೆರಳಿದರು.

ಕಲ್ಸಂಕದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ಯಾತ್ರೆ ಮುಗಿಯುವ ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅಲ್ಲಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೀನುಗಾರ ಮಹಿಳೆಯರ ಕಾರ್ಯಕ್ರಮಕ್ಕೆ ಸರ್ಕಾರಿ ಕಾರನ್ನು ಬಿಟ್ಟು ಸಚಿವ ಖಾದರ್‌ ಕಾರಿನಲ್ಲಿ ಬಂದರು.

ಶ್ಯಾಮಿಲಿ ಸಭಾಂಗಣದ ಕಾರ್ಯಕ್ರಮ ಮುಗಿಸಿದ ಸಿದ್ದರಾಮಯ್ಯ ಅಲ್ಲಿಂದ ಮಂಗಳೂರಿಗೂ ಖಾದರ್‌ ಅವರ ಕಾರಿನಲ್ಲೇ ಹೊರಟರು. ಸ್ವತಃ ಖಾದರ್‌ ಕಾರನ್ನು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಕಾರಿನಲ್ಲಿ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಐವನ್‌ ಡಿಸೋಜ ಕೂಡ ಇದ್ದರು. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಕೂಡ ಖಾಸಗಿ ಕಾರಿನಲ್ಲಿ ತೆರಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !