ಕಿದ್ವಾಯಿ ಆಸ್ಪತ್ರೆ ಸಿಗಲಿದೆ ಸೂಪರ್‌ ಸ್ಪೆಷಾಲಿಟಿ ಸ್ಪರ್ಶ

7
* ರೋಗಿಯ ಮೊಬೈಲ್‌ ಸಂಖ್ಯೆಗೆ ಚಿಕಿತ್ಸೆ ಮಾಹಿತಿ ರವಾನೆ * ಇನ್ಫೊಸಿಸ್‌ ಪ್ರತಿಷ್ಠಾನದಿಂದ ನೆರವು

ಕಿದ್ವಾಯಿ ಆಸ್ಪತ್ರೆ ಸಿಗಲಿದೆ ಸೂಪರ್‌ ಸ್ಪೆಷಾಲಿಟಿ ಸ್ಪರ್ಶ

Published:
Updated:
Deccan Herald

ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಸರದಿ ಸಾಲಿನಲ್ಲಿ ಕಾಯುವ ಪ್ರಮೇಯ ಇನ್ನು ಕೆಲವೇ ತಿಂಗಳಿನಲ್ಲಿ ಕೊನೆಯಾಗಲಿದೆ. ಆಸ್ಪತ್ರೆಗೆ ಯಾವ ದಿನ, ಯಾವ ಸಮಯಕ್ಕೆ ಬಂದು ವೈದ್ಯರನ್ನು ಕಾಣಬೇಕು, ಯಾವ ಪರೀಕ್ಷೆಯನ್ನು ಮಾಡಿಸಬೇಕು ಎಂಬ ಮಾಹಿತಿ ರೋಗಿ ನೋಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಸಂದೇಶ ಮೂಲಕ ಬರಲಿದೆ.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಎಲ್ಲ ರೋಗಿಗಳ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಕಂಪ್ಯೂಟರೀಕರಣ ಮಾಡಿ, ಇ–ಆಸ್ಪತ್ರೆಯಾಗಿಸಲು ಸಿದ್ಧತೆ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ ಪ್ರತಿ ರೋಗಿಗೂ ಒಂದು ಬಾರ್‌ಕೋಡ್‌ ಕೊಡಲಾಗುತ್ತದೆ. ರೋಗಿಯ ರಕ್ತಪರೀಕ್ಷೆ, ಎಕ್ಸರೇ, ಸಿಟಿ ಸ್ಕ್ಯಾನ್‌ ವರದಿಗಳನ್ನು ಆ ಕೋಡ್‌ನಲ್ಲೆ ಸಂಗ್ರಹಿಸಲಾಗುತ್ತದೆ.‌ ಕೋಡ್‌ ದಾಖಲಿಸಿದ ತಕ್ಷಣ, ರೋಗಿಯ ವೈದ್ಯಕೀಯ ವಿವರ ವೈದ್ಯರಿಗೆ ಸಿಗಲಿದೆ. ಅದರಿಂದ ಸೂಕ್ತ ಚಿಕಿತ್ಸೆಯನ್ನು ತ್ವರಿತವಾಗಿ ನೀಡಬಹುದಾಗಿದೆ. ಈ ಯೋಜನೆ ಜಾರಿಮಾಡಲು ಇನ್ಫೊಸಿಸ್‌ ಪ್ರತಿಷ್ಠಾನ ಮುಂದೆ ಬಂದಿದೆ.

ಸಂಸ್ಥೆ ಆರಂಭಗೊಂಡಾಗಿನಿಂದ ಈವರೆಗಿನ ಎಲ್ಲ ಕಡತಗಳನ್ನು ಡಿಜಿಟಲೀಕರಣ ಮಾಡಲು ಸಹ ನಿರ್ಧರಿಸಲಾಗಿದೆ. ಈ ಕೆಲಸವನ್ನು ಆರು ತಿಂಗಳಲ್ಲಿ ಮುಗಿಸಲು ಸಿಬ್ಬಂದಿ ಕಾಲಮಿತಿ ನಿಗದಿಪಡಿಸಿಕೊಂಡಿದ್ದಾರೆ. 

ಸರ್ಕಾರದಿಂದ ಆಸ್ಪತ್ರೆಗೆ ₹27 ಕೋಟಿ ಅನುದಾನ ಬಂದಿದೆ. ಅದರಲ್ಲಿ ₹12 ಕೋಟಿಯನ್ನು ಬೋನ್‌ ಮ್ಯಾರೊ ಟ್ರಾನ್ಸ್‌ಪ್ಲ್ಯಾಂಟ್‌ ಮತ್ತು ₹15 ಕೋಟಿಯನ್ನು ಪಿಇಟಿ ಸ್ಕ್ಯಾನ್‌ ಸೇವೆಗಳನ್ನು ನೀಡಲು ಬೇಕಾದ ಕಟ್ಟಡ ಮತ್ತು ವೈದ್ಯಕೀಯ ಪರಿಕರಗಳಿಗಾಗಿ ವಿನಿಯೋಗಿಸಲಾಗುತ್ತಿದೆ.

ಸಿಫಾನಿ ದಾಗಾ ಬಿಲ್ಡರ್ಸ್‌ ಕಟ್ಟಿಸುತ್ತಿರುವ ನಾಲ್ಕು ಅಂತಸ್ತಿನ, 400 ಹಾಸಿಗೆಗಳ ಬ್ಲಾಕ್‌ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಈ ಬ್ಲಾಕ್‌ಅನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡುವ ಸಾಧ್ಯತೆ ಇದೆ.

’72,000 ಚದರ ಅಡಿ ಸ್ಥಳಾವಕಾಶ ಇರುವ ಐದು ಅಂತಸ್ತಿನ ಹೊಸ ಓಪಿಡಿ ವಿಭಾಗದ ಕಾಮಗಾರಿ ನಡೆಯುತ್ತಿದೆ. ಅದನ್ನು ಮುಂದಿನ ಮಾರ್ಚ್‌–ಏಪ್ರಿಲ್‌ ಹೊತ್ತಿಗೆ ಮುಗಿಸಿ ಆಯುಸ್ಮಾನ್‌–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ಈಗಿರುವ 8 ಶಸ್ತ್ರಚಿಕಿತ್ಸಾ ಕೊಠಡಿಗಳ(ಒ.ಟಿ.) ನವೀಕರಿಸುವಿಕೆಯೊಂದಿಗೆ, ಹೊಸದಾಗಿ 5 ಒ.ಟಿ.ಗಳನ್ನು ರೂಪಿಸಲು ಪ್ರತಿಷ್ಠಾನ ಹಣಕಾಸಿನ ನೆರವು ನೀಡುತ್ತಿದೆ. 251 ನರ್ಸ್‌, 65 ಟೆಕ್ನಿಷಿಯನ್ಸ್‌ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಮೂರ್ನಾಲ್ಕು ವಾರದಲ್ಲಿ ಅವರು ಸೇವೆಗೆ ಲಭ್ಯ ಆಗಲಿದ್ದಾರೆ’ ಎಂದು ತಿಳಿಸಿದರು.

‘ಎಲ್ಲ ವರ್ಗದ ಜನರು ಅಗತ್ಯವಿರುವಾಗ ಆಸ್ಪತ್ರೆಗೆ ಬರುವಂತಾಗಲು ಮುಂಬರುವ ದಿನಗಳಲ್ಲಿ 50 ಹಾಸಿಗೆಗಳ ಡಿಲಕ್ಸ್‌ ವಾರ್ಡ್‌ ಆರಂಭಿಸುತ್ತೇವೆ. ಹಾಗೆಯೇ ಆರೋಗ್ಯ ವಿಮೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಜನರಿಗೆ ಸೌಲಭ್ಯ ಹೆಚ್ಚಿಸುತ್ತೇವೆ’ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.

‘ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯ ನಿಧಿಯಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಆಸ್ಪತ್ರೆಯ ಆವರಣದಲ್ಲಿ ಅಳವಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.
*

ಬಿಬಿಎಂಪಿ ₹15 ಕೋಟಿ ವೆಚ್ಚದಲ್ಲಿ 10 ಅಂತಸ್ತಿನ ವಾಹನ ನಿಲುಗಡೆ ಕಟ್ಟಡ ಕಟ್ಟಲು ಮುಂದೆ ಬಂದಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭ ಆಗಲಿದೆ.
–ಡಾ.ಸಿ.ರಾಮಚಂದ್ರ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !