ಬುಧವಾರ, ನವೆಂಬರ್ 20, 2019
27 °C

ಅಶೋಕ ಬಾಗೇವಾಡಿ ನಿಧನ

Published:
Updated:
Prajavani

ಬೆಳಗಾವಿ: ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಉಪ– ಕಾರ್ಯಾಧ್ಯಕ್ಷ ಅಶೋಕ ಬಾಗೇವಾಡಿ (74) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.

1945ರ ಮಾರ್ಚ್‌ 22ರಂದು ನಿಪ್ಪಾಣಿಯಲ್ಲಿ ಜನಿಸಿದ್ದ ಅವರು, ಬಿ.ಕಾಂ ಪದವಿ ಪಡೆದಿದ್ದರು. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಕನ್ನಡದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದರು. 1975ರಲ್ಲಿ ಕೆಎಲ್‌ಇ ಸಂಸ್ಥೆಯ ಆಡಳಿತ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಂಸ್ಥೆಯು ಆರಂಭಿಸಿದ್ದ ಹಲವು ಶಿಕ್ಷಣ ಕೇಂದ್ರಗಳಲ್ಲಿ ಇವರ ಕೊಡುಗೆ ಸಾಕಷ್ಟಿತ್ತು. 2001ರಿಂದ ಸಂಸ್ಥೆಯ ಉಪ– ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ನಿಪ್ಪಾಣಿಯ ಅವರ ಹೊಲದಲ್ಲಿ ರಾತ್ರಿ ಅಂತ್ಯಸಂಸ್ಕಾರ ನಡೆಯಿತು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಧ್ಯಕ್ಷ ಶಿವಾನಂದ ಕೌಜಲಗಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)