ಶನಿವಾರ, ಫೆಬ್ರವರಿ 29, 2020
19 °C

ಹಾಲಿನ ದರ ಏರಿಕೆ ಸಿಎಂ ವಿವೇಚನೆಗೆ: ಕೆಎಂಎಫ್ ಆಡಳಿತ ಮಂಡಳಿ ಒ‍ಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಂದಿನಿ ಹಾಲಿನ ಮಾರಾಟ ದರವನ್ನು ₹2 ಅಥವಾ ₹3 ಕ್ಕೆ ಏರಿಕೆ ಮಾಡಲು ಕೆಎಂಎಫ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಈ ಪ್ರಸ್ತಾವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಂಗಳಕ್ಕೆ ಹೋಗಿದೆ.

ಕೆಎಂಎಫ್ ಆಡಳಿತ ಮಂಡಳಿ ಸಭೆ ಶುಕ್ರವಾರ ನಡೆಯಿತು. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವ ಅಧಿಕಾರವನ್ನು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಭೆ ನೀಡಿದೆ. ‘ಮುಖ್ಯಮಂತ್ರಿ ಒಪ್ಪಿಗೆ ಪಡೆದು ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟ ಮಾಡಲಾಗುವುದು’ ಎಂದು ಜಾರಕಿಹೊಳಿ ತಿಳಿಸಿದರು.

‘ಮೂರು ವರ್ಷಗಳಿಂದ ದರ ಏರಿಕೆ ಮಾಡಿಲ್ಲ. ಹೀಗಾಗಿ, ದರ ಹೆಚ್ಚಳ ಮಾಡಬೇಕು’ ಎಂಬ ಪ್ರಸ್ತಾವವನ್ನು 14 ಒಕ್ಕೂಟಗಳು ಕೆಎಂಎಫ್‌ಗೆ ಸಲ್ಲಿಸಿದ್ದವು. ಸದ್ಯ ಸಾಮಾನ್ಯ ಹಾಲು ಲೀಟರ್‌ಗೆ ₹35, ವಿಶೇಷ ಹಾಲು ಲೀಟರ್‌ಗೆ ₹42ರವರೆಗೆ ಇದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು