ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಮತ್ತೊಂದು ರೈಲು: ಕೊಚ್ಚುವೇಳಿ–ಬೆಂಗಳೂರು ಎಕ್ಸ್‌ಪ್ರೆಸ್‌ ವಿಸ್ತರಣೆ

Last Updated 29 ಸೆಪ್ಟೆಂಬರ್ 2019, 10:32 IST
ಅಕ್ಷರ ಗಾತ್ರ

ಮೈಸೂರು: ಕೊಚ್ಚುವೇಳಿ–ಬೆಂಗಳೂರು ರೈಲುಗಾಡಿ ಇದೀಗ ಮೈಸೂರುವರೆಗೆ ಸಂಚರಿಸಲಿದೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ವಿಸ್ತರಿತ ರೈಲುಗಾಡಿಗೆ ಹಸಿರು ನಿಶಾನೆ ತೋರಿದರು.

ಈ ರೈಲು (ಸಂಖ್ಯೆ 16315) ಮೈಸೂರಿನಿಂದ ಮಧ್ಯಾಹ್ನ 12.50ಕ್ಕೆ ಹೊರಟು ಬೆಂಗಳೂರನ್ನು 4.35ಕ್ಕೆ ಸೇರಲಿದೆ. ಬೆಂಗಳೂರನ್ನು 4.35ಕ್ಕೆ ಬಿಡಲಿರುವ ರೈಲು ಮಾರನೇ ದಿನ ಬೆಳಿಗ್ಗೆ 9.35ಕ್ಕೆ ಕೊಚ್ಚುವೇಳಿ ತಲುಪಲಿದೆ.

ಕೊಚ್ಚುವೇಳಿಯಿಂದ ಸಂಜೆ 4.45ಕ್ಕೆ ಹೊರಡಲಿರುವ ರೈಲು (ಸಂಖ್ಯೆ 16316) ಮಾರನೇ ದಿನ ಮುಂಜಾನೆ 8ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 8.25ಕ್ಕೆ ಹೊರಡಲಿರುವ ರೈಲು ಮೈಸೂರನ್ನು 11.20ಕ್ಕೆ ಸೇರಲಿದೆ.

ಹೆಚ್ಚುವರಿ ಸೌಲಭ್ಯ:ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ ಸಂದರ್ಭಮೈಸೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಿದರು.

ರೈಲ್ವೆ ರಾಜ್ಯ ಸಚಿವಸುರೇಶ್ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವವಿ.ಸೋಮಣ್ಣ, ಪ್ರವಾಸೋದ್ಯಮ ಸಚಿವಸಿ.ಟಿ.ರವಿ, ಲೋಕಸಭಾ ಸದಸ್ಯಪ್ರತಾಪ್ ಸಿಂಹ, ಶಾಸಕನಿರಂಜನ್ ಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT