ಕೊಡಗು ಜಿಲ್ಲೆಯ ಮರು ನಿರ್ಮಾಣಕ್ಕೆ ಕೈಜೋಡಿಸೋಣ: ನಟಿ ರಶ್ಮಿಕಾ ಮಂದಣ್ಣ

7
ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಕಾರ್ಯಕ್ರಮದಲ್ಲಿ ಭಾಗಿ

ಕೊಡಗು ಜಿಲ್ಲೆಯ ಮರು ನಿರ್ಮಾಣಕ್ಕೆ ಕೈಜೋಡಿಸೋಣ: ನಟಿ ರಶ್ಮಿಕಾ ಮಂದಣ್ಣ

Published:
Updated:
Deccan Herald

ವಿರಾಜಪೇಟೆ: ‘ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಪ್ರಾಣಹಾನಿಯೊಂದಿಗೆ ಅನೇಕರು ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೊಡಗಿನ ಮರು ನಿರ್ಮಾಣಕ್ಕೆ ಎಲ್ಲರೂ ಒಮ್ಮತದಿಂದ ಕೈಜೋಡಿಸೋಣ’ ಎಂದು ಚಿತ್ರನಟಿ ರಶ್ಮಿಕಾ ಮಂದಣ್ಣ ಮನವಿ ಮಾಡಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಸಲುವಾಗಿ ಪಟ್ಟಣದ ಸೆರೆನಿಟಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯಾವುದೇ ಅನಾಹುತ, ದುರಂತ ಸಂಭವಿಸಿದರೂ ಧೈರ್ಯದಿಂದ ಎದುರಿಸುವ ಶಕ್ತಿ ಯೋಧರ ನಾಡಾಗಿರುವ ಕೊಡವರಿಗೆ ಇದೆ. ಜಿಲ್ಲೆಯ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದರೊಂದಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ’ ಎಂದರು.

ಜಿಲ್ಲೆಯ ವಿವಿಧೆಡೆಯ 31 ಮಂದಿ ಸಂತ್ರಸ್ತರಿಗೆ ತಲಾ ₹10 ಸಾವಿರ ಸಹಾಯ ಧನವನ್ನು ರಶ್ಮಿಕಾ ನೀಡಿದರು.

ಇದನ್ನೂ ಓದಿ...
ಕೊಡಗು ಪ್ರವಾಹ: ಟ್ವಿಟರ್‌ನಲ್ಲಿ ಭಾವನಾತ್ಮಕ ಪತ್ರ ಬರೆದ ರಶ್ಮಿಕಾ ಮಂದಣ್ಣ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !