ಕೊಡಗಿನಲ್ಲಿ ಸಂಕಷ್ಟ; ನಮ್ಮ ಪೋಷಕರನ್ನು ರಕ್ಷಿಸಿ: ಫೇಸ್‌ಬುಕ್‌ ವಿಡಿಯೊದಲ್ಲಿ ಮನವಿ

7

ಕೊಡಗಿನಲ್ಲಿ ಸಂಕಷ್ಟ; ನಮ್ಮ ಪೋಷಕರನ್ನು ರಕ್ಷಿಸಿ: ಫೇಸ್‌ಬುಕ್‌ ವಿಡಿಯೊದಲ್ಲಿ ಮನವಿ

Published:
Updated:

ಬೆಂಗಳೂರು: ಭಾರಿ ಮಳೆ, ಭೂ ಕುಸಿತದಿಂದ ಕೊಡಗಿನ ಜನಜೀವನ ತತ್ತರಿಸಿದೆ. ಸಂಕಷ್ಟದಲ್ಲಿ ಸಿಲುಕಿರುವ ತಮ್ಮವರ ರಕ್ಷಣೆಗೆ ನೆರವಾಗಿ ಎಂಬ ವಿಡಿಯೊಗಳನ್ನು ಮಾಡಿ ಯುವಕರು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ತಮ್ಮ ಕುಟುಂಬದವರನ್ನು ರಕ್ಷಿಸಿ ಎಂದು ವಿಡಿಯೊದಲ್ಲಿ ಅಂಗಲಾಚಿದ್ದಾರೆ.

ದೀಪಕ್‌ ಜೊಯಪ್ಪ (Deepak Joyappa) ಎಂಬುವರು ಫೇಸ್‌ಬುಕ್‌ನಲ್ಲಿ ವಿಡಿಯೊವೊಂದನ್ನು ಹಾಕಿದ್ದು, ಅದರಲ್ಲಿ ’ನಮಸ್ಕಾರ ಗೆಳೆಯರೆ. ಈ ವಿಡಿಯೊ ಮಾಡಿರುವ ಉದ್ದೇಶವೇನೆಂದರೆ ಮದರಾಡಿನ ಅಕ್ಕ ಪಕ್ಕ ಬೆಟ್ಟ ಕುಸಿಯುತ್ತಿವೆ. ನಮ್ಮ ಅಪ್ಪ ಮತ್ತು ಕುಟುಂಬ ಮಲೆನಾಡಿನ ಶಾಲೆಯಲ್ಲಿದ್ದಾರೆ. ಅವರ ಸಂಪರ್ಕ ಸಿಗುತ್ತಿಲ್ಲ. ಯಾರಾದರು ಅಕ್ಕಪಕ್ಕ ಇದ್ದರೆ, ಕಾಟ್ಕೆರೆ ಬಳಿ ಇದ್ದರೆ ಅವರನ್ನು ಆ ಸ್ಥಳದಿಂದ ಕರೆತರಲು ಹೇಳಿ. ಯಾಕೆಂದರೆ ಜೋಡು ಪಾಲ, ಮಣ್ಣಂಗೇರಿ ಬೆಟ್ಟಗಳು ಒಂದೇ ಸಾಲಿನ ಬೆಟ್ಟಗಳು. ಎಲ್ಲಾ ಒಂದಾಗಿ ಬೀಳುವ ಸಾಧ್ಯತೆಗಳಿವೆ. ಕಂಪನಗಗಳೂ ಕೇಳುತ್ತಿವೆಯಂತೆ. ಅವರಿಗೆ ಅಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಯಾರಾದರು ಕಾಟ್ಕೆರೆ ಬಳಿ ಇದ್ದರೆ ಅಥವಾ ಶಾಲೆ ಬಳಿ ಇದ್ದರೆ ಅವರನ್ನು ಸಮತಟ್ಟಾದ/ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿ. ಥ್ಯಾಂಕ್ಸ್‌....’ ಎಂದು ಅವರು ಮಾತು ಮುಗಿಸಿದ್ದಾರೆ.

ಅವರೇ ಶೇರ್‌ ಮಾಡಿರುವ (Save Kodagu) ಖಾತೆಯಲ್ಲಿನ ಮತ್ತೊಂದು ವಿಡಿಯೊದಲ್ಲಿ ಎಮ್ಮೆತಾಳು ಗ್ರಾಮದದಿಂದ ಮಾತನಾಡಿರುವುದು ಇದೆ. 24 ಗಂಟೆಗಳ ಹಿಂದೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿರುವ ಪ್ರದೇಶವನ್ನು ತೋರಿಸುತ್ತಾ ಮಾತನಾಡಿದ್ದಾರೆ. ಭೂ ಕುಸಿದಿರುವ ಆಚೆಯ ಅಂಚಿನಲ್ಲಿನ ಮನೆಯೊಂದಲ್ಲಿ ಈಭಾಗದಲ್ಲಿರುವವರ ವಯಸ್ಕ ತಂದೆ ತಾಯಿ ಇದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾ ತಂಡ ನೆರವಿಗೆ ಬರಬೇಕು. ಹೆಲಿಕಾಪ್ಟರ್‌ ನಿಂದ ಮಾತ್ರ ಅವರನ್ನು ರಕ್ಷಿಸಲು ಸಾಧ್ಯ. ಕುಸಿದ ಸ್ಥಳದಲ್ಲಿ ಕೆಸರು ಇರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಬಂದು ಸ್ಥಳವನ್ನು ನೋಡಿ ಅಲ್ಲಿಗೆ ಹೋಗಲು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲಿಗೆ ಹೋಗಲಾಗಿಲ್ಲ. ನೆರವಿಗೆ ಬನ್ನಿ ಎಂದು ಮನವಿ ಮಾಡಿದ್ದಾರೆ. 

ಈಚೆದಡದಲ್ಲಿರುವ ಮನೆಯ ಬಳಿ ಇರುವ ಮಹಿಳೆಯೊಬ್ಬರನ್ನು ಅವರು ಮಾತನಾಡಿಸಿದ್ದಾರೆ, ಅಗೋ ಅಲ್ಲಿ ಕಾಣುತ್ತಿದೆಯಲ್ಲ ಆ ಮನೆಯಲ್ಲಿ ನನ್ನ ತಂದೆ ತಾಯಿ ಇದ್ದಾರೆ. ಅವರನ್ನು ರಕ್ಷಿಸಿ, ಅವರು ಒಮ್ಮೆ ಹೊರಗೆ ಬಂದು ಕೈ ಬೀಸಿದ್ದಾರೆ ಅಷ್ಟೆ. ದಯಮಾಡಿ ಅವರನ್ನು ರಕ್ಷಿಸಿಕೊಡಿ. ಕೈಮುಗಿಯುತ್ತೇವೆ.... ಎಂದು ಆ ಮಹಿಳೆ ಅಂಗಲಾಚಿದ್ದಾರೆ.

* ಇವನ್ನೂ ಓದಿ...
ಕೊಡಗು ಜಿಲ್ಲೆಯಲ್ಲಿ ಮಳೆಗೆ ಸಿಲುಕಿದ್ದೀರಾ? ಸಹಾಯ ಮಾಡುವವರು ಇಲ್ಲಿದ್ದಾರೆ

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !