ಭಾನುವಾರ, ಆಗಸ್ಟ್ 18, 2019
24 °C

ಸಹಜ ಸ್ಥಿತಿಯತ್ತ ಕೊಡಗು ಜಿಲ್ಲೆ

Published:
Updated:

ಮಡಿಕೇರಿ: ಭಾರಿ ಮಳೆ, ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯು ಸಹಜ ಸ್ಥಿತಿಯತ್ತ ಮರಳುತ್ತಿದೆ. ಪ್ರಮುಖ ನದಿ, ಹಳ್ಳ–ಕೊಳ್ಳಗಳಲ್ಲಿ ನೀರಿನಮಟ್ಟ ಇಳಿಕೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಆರು ಮಾರ್ಗ ಹೊರತುಪಡಿಸಿ ಉಳಿದೆಡೆ ವಾಹನ ಸಂಚಾರ ಆರಂಭವಾಗಿದೆ.

45 ಪರಿಹಾರ ಕೇಂದ್ರಗಳಲ್ಲಿ 7,873 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಪ್ರವಾಹ ತಗ್ಗಿರುವ ಗ್ರಾಮಗಳಿಗೆ ಸಂತ್ರಸ್ತರು ತೆರಳುತ್ತಿದ್ದಾರೆ. ಮನೆ ಕಳೆದುಕೊಂಡವರು ಹಾಗೂ ರಸ್ತೆ ಸಂಪರ್ಕ ಬಂದ್ ಆಗಿರುವ ಗ್ರಾಮಗಳ ಸಂತ್ರಸ್ತರು ಮಾತ್ರ ಪರಿಹಾರ ಕೇಂದ್ರಗಳಲ್ಲೇ ಉಳಿದಿದ್ದಾರೆ. 

Post Comments (+)