ಬುಧವಾರ, ಆಗಸ್ಟ್ 21, 2019
28 °C
ಉಕ್ಕಿ ಹರಿದ ಕಿರುಹೊಳೆ, ಲಕ್ಷ್ಮಣತೀರ್ಥ ನದಿ

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ

Published:
Updated:
Prajavani

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಕಿರುಹೊಳೆ ಉಕ್ಕೇರಿದ ಪರಿಣಾಮ, ಅಪಾಯದಲ್ಲಿ ಸಿಲುಕಿದ್ದ ಏಳು ಕುಟುಂಬಗಳನ್ನು ಬುಧವಾರ ಸಂಜೆ ರಕ್ಷಿಸಲಾಗಿದೆ.

ಸ್ಥಳಕ್ಕೆ ತೆರಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ಕೆಲವರಿಗೆ ಆಶ್ರಯ ಕಲ್ಪಿಸಲಾಗಿದೆ. ಉಳಿದವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ, ಕಿರುಹೊಳೆ ಉಕ್ಕಿ ಹರಿಯುತ್ತಿವೆ. ಇದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ.

Post Comments (+)