ಕರಗಿದ ಬೆಟ್ಟಗಳು, ಗ್ರಾಮಗಳು ಕಣ್ಮರೆ

7
ಮಕ್ಕಂದೂರಿನ ಅಪಾಯಕಾರಿ ಸ್ಥಳದಲ್ಲಿದ್ದ 200 ಮಂದಿ ಸ್ಥಳಾಂತರ, ರಕ್ಷಣಾ ಕಾರ್ಯ ಚುರುಕು

ಕರಗಿದ ಬೆಟ್ಟಗಳು, ಗ್ರಾಮಗಳು ಕಣ್ಮರೆ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾರದಿಂದ ಸುರಿದ ಮಹಾಮಳೆಗೆ ಬೆಟ್ಟಗಳು ಕರಗಿ ಹಲವು ಗ್ರಾಮಗಳೇ ನಾಪತ್ತೆಯಾಗಿವೆ. ಸೋಮವಾರಪೇಟೆ ತಾಲ್ಲೂಕು ಮಾದಾಪುರ ವ್ಯಾಪ್ತಿಯ ಹಲವು ಗ್ರಾಮಗಳ ಗುರುತೇ ಸಿಗುತ್ತಿಲ್ಲ.

ಕಾಂಡನಕೊಲ್ಲಿಯಲ್ಲಿ ದೊಡ್ಡಪ್ರಮಾಣದಲ್ಲಿ ಗುಡ್ಡ ಕುಸಿದು ಗ್ರಾಮವೊಂದು ನೆಲಸಮವಾಗಿದೆ. ಬೆಟ್ಟದ ಮೇಲಿದ್ದ ಮಕ್ಕಂದೂರು, ಮುಕ್ಕೊಡ್ಲು, ಹಟ್ಟಿಹೊಳೆಯಲ್ಲಿ ಮನೆಗಳು ಬಿದ್ದಿವೆ. ಬೆಟ್ಟ ಕುಸಿತ, ಮಣ್ಣಿನ ರಾಶಿ, ರಸ್ತೆ ಕುಸಿತದ ದೃಶ್ಯಗಳು ಭೀಕರವಾಗಿವೆ. ಜೋಡುಪಾಲದ ಬಳಿ ಬೆಟ್ಟ 1 ಕಿ.ಮೀ.ನಷ್ಟು ಬಾಯ್ತೆರೆದಿದ್ದು, ಸುತ್ತಮುತ್ತಲ ಜನರನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ.

ಮಕ್ಕಂದೂರು ಬೆಟ್ಟದ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ನಾಲ್ಕು ದಿನಗಳಿಂದ ಇದ್ದ 200 ಮಂದಿಯನ್ನು 80 ಯೋಧರು ರಕ್ಷಿಸಿದ್ದಾರೆ. ಬಳಿಕ 10 ಕಿ.ಮೀ. ನಡೆದುಬಂದ ಸಂತ್ರಸ್ತರು, ಗಂಜಿಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಆಹಾರ, ನೀರು ಇಲ್ಲದೇ ವೃದ್ಧರು, ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು.

 

ಈ ಭಾಗದಲ್ಲಿ ಯೋಧರು, ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಕಾರ್ಯಾ ಚರಣೆ ಮುಂದುವರೆದಿದೆ. ಕುಸಿಯುತ್ತಿದ್ದ ಮಣ್ಣಿನ ನಡುವೆ ಹಗ್ಗ ಕಟ್ಟಿಕೊಂಡು ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆ ತರಲಾಗುತ್ತಿದೆ.

ಹಾಲೇರಿಯ ಹಟ್ಟಿಹೊಳೆ ಪ್ರವಾಹ ದಲ್ಲಿ ಸಿಲುಕಿದ್ದವರನ್ನು ಸ್ಥಳೀಯರು ಕಾಪಾಡಿದ್ದಾರೆ. ಪ್ರವಾಹ ತಗ್ಗಿದ ನಂತರ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ಮಾಂದಲ್‌ಪಟ್ಟಿಯಲ್ಲೂ 200 ಮಂದಿಯನ್ನು ಎಸ್‌ಡಿಆರ್‌ಎಫ್‌, ಸ್ಥಳೀಯರು ರಕ್ಷಿಸು ವಲ್ಲಿ ಯಶಸ್ವಿಯಾಗಿದ್ದಾರೆ.

ಹವಾಮಾನ ವೈಪರೀತ್ಯದಿಂದ ಶನಿವಾರವೂ ಹೆಲಿಕಾಪ್ಟರ್‌ ಕಾರ್ಯಾಚರಣೆ ಸಾಧ್ಯವಾಗಲಿಲ್ಲ.

ಹೀಗಾಗಿ, ಅತ್ಯಂತ ಅಪಾಯದ ಸ್ಥಳದಿಂದಲೂ ಯೋಧರೇ ಸಂತ್ರಸ್ತರನ್ನು ಕಾಪಾಡುತ್ತಿದ್ದಾರೆ.


ಸುಳ್ಯ ತಾಲ್ಲೂಕಿನ ಗಡಿ ಭಾಗದಲ್ಲಿರುವ ಜೋಡುಪಾಲದಲ್ಲಿ ಶುಕ್ರವಾರ ಭಾರಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ
ನಾಮಾವಶೇಷವಾಗಿರುವ ಪರಿ. ಹೆದ್ದಾರಿಯ ಮೇಲೆ ಹರಿಯುತ್ತಿರುವ ತೊರೆಯನ್ನು ಕಾಲುಸಂಕದ ಮೂಲಕ ದಾಟುತ್ತಿರುವ
ದೃಶ್ಯ ಶನಿವಾರ ಕಂಡುಬಂತು. ಪ್ರಜಾವಾಣಿ ಚಿತ್ರ/ ಗೋವಿಕಂದರಾಜ ಜವಳಿ

 

ಧೈರ್ಯ ತುಂಬಿದ ಮುಖ್ಯಮಂತ್ರಿ

ಪ್ರವಾಹಪೀಡಿತ ಕೊಡಗು ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇಲ್ಲಿನ ಮೈತ್ರಿ ಸಭಾಂಗಣದ ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ನೂರಾರು ಸಂಖ್ಯೆಯಲ್ಲಿದ್ದ ಸಂತ್ರಸ್ತರು ಕಣ್ಣೀರು ಸುರಿಸಿ, ನೆಲೆ ಕಲ್ಪಿಸಲು ಕೋರಿದರು.

‘ಧೈರ್ಯ ಕಳೆದುಕೊಳ್ಳಬೇಡಿ. ಮಳೆ ನಿಂತ ತಕ್ಷಣವೇ ಹೊಸ ಜೀವನ ಕಲ್ಪಿಸಲು ಸರ್ಕಾರ ಸಹಾಯ ಮಾಡಲಿದೆ’ ಎಂದರು.

ಪ್ರಕೃತಿ ವಿಕೋಪದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ₹5 ಲಕ್ಷ ಮತ್ತು ಮನೆ ಕಳೆದುಕೊಂಡವರಿಗೆ ₹2 ಲಕ್ಷದಿಂದ ₹2.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಇವನ್ನೂ ಓದಿ

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !