ಕೊಡಗು ಮಳೆ: ಹೆಲಿಕಾಪ್ಟರ್‌ ಏರ್‌ಲಿಫ್ಟ್‌ಗೆ ಈ ಕ್ರಮ ಅನುಸರಿಸಿ

7

ಕೊಡಗು ಮಳೆ: ಹೆಲಿಕಾಪ್ಟರ್‌ ಏರ್‌ಲಿಫ್ಟ್‌ಗೆ ಈ ಕ್ರಮ ಅನುಸರಿಸಿ

Published:
Updated:

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೇನಾ ಹೆಲಿಕ್ಯಾಪ್ಟರ್ ಮೂಲಕ ಅಗತ್ಯ ವಸ್ತುಗಳ ರವಾನೆ ಮತ್ತು ಏರ್ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ರಕ್ಷಣಾ ತಂಡದ ಗಮನ ಸೆಳೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕೆಂದು ಭಾರತೀಯ ಸೇನೆ ಪ್ರಕಟಣೆ ಹೊರಡಿಸಿದೆ.

* ಹೆಲಿಕಾಪ್ಟರ್‌ ಹಾರಾಟವನ್ನು ಗಮನಿಸಿ.

* ಹೆಲಿಕಾಪ್ಟರ್‌ನಲ್ಲಿನ ತಂಡದ ಗಮನ ಸೆಳೆಯಲು
  1. ಎತ್ತರದ ಪ್ರದೇಶಕ್ಕೆ ಬಂದು ಸೇರಿ.
  2. ಬೆಂಕಿ ಅಥವಾ ಹೊಗೆ ಹಾಕಿ
  3. ಇಲ್ಲವೇ ಬಣ್ಣದ ಬಟ್ಟೆಗಳನ್ನು ಹಾರಿಸಿ

ಐದಾರು ಹೆಲಿಕಾಪ್ಟರ್‌ಗಳು ತೀವ್ರ ಪ್ರವಾಹ ಪೀಡಿತ ಪ್ರದೇಶದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹಾರಾಟ ನಡೆಸಲಿವೆ. ಈ ಹಾರಾಟದ ವೇಳೆ ಕುಡಿಯುವ ನೀರು ಮತ್ತು ಪರಿಹಾರ ಸಾಮಗ್ರಿಗಳನ್ನೂ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಬರಹ ಇಷ್ಟವಾಯಿತೆ?

  • 7

    Happy
  • 0

    Amused
  • 1

    Sad
  • 1

    Frustrated
  • 0

    Angry

Comments:

0 comments

Write the first review for this !