ಕೊಡಗಿನಲ್ಲಿ ನಿಲ್ಲದ ಬಿರುಗಾಳಿ, ಮಳೆ: ರಕ್ಷಣಾ ಕಾರ್ಯ‌ ಮತ್ತಷ್ಟು ವಿಳಂಬ ಸಾಧ್ಯತೆ

7

ಕೊಡಗಿನಲ್ಲಿ ನಿಲ್ಲದ ಬಿರುಗಾಳಿ, ಮಳೆ: ರಕ್ಷಣಾ ಕಾರ್ಯ‌ ಮತ್ತಷ್ಟು ವಿಳಂಬ ಸಾಧ್ಯತೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮಳೆ‌ ಆರ್ಭಟಿಸುತ್ತಿದೆ. ಮಳೆಯ ಅಬ್ಬರದ ಜೊತೆಗೆ, ಬಿರುಗಾಳಿಯೂ ಬೀಸುತ್ತಿದೆ.

ಮಕ್ಕಂದೂರು ಸುತ್ತಮುತ್ತಲ ಬೆಟ್ಟಗಳಲ್ಲಿ 600 ಮಂದಿ ಸಿಲುಕಿದ್ದು, ಇಂದು ಹೆಲಿಕಾಪ್ಟರ್ ಮೂಲಕ ಅವರ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಂದೂರು ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿರುವ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುವ ಆತಂಕವಿದೆ‌.

ಮನೆ ಕಳೆದುಕೊಂಡ ನಿರಾಶ್ರಿತರು ಬೆಟ್ಟಗುಡ್ಡ ಹತ್ತಿ ತಾವಾಗಿಯೇ ಗಂಜಿಕೇಂದ್ರದತ್ತ ಬರುತ್ತಿದ್ದಾರೆ. ಇನ್ನು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಸ್ವಯಂ ಸೇವಕರು ಪ್ರವಾಹದಲ್ಲಿ ಸಿಲುಕಿದ್ದವರನ್ನು‌ ರಕ್ಷಣೆ ಮಾಡುತ್ತಿದ್ದಾರೆ.

ಚೇರಂಬಾಣೆ ಸರ್ಕಾರಿ ಶಾಲೆಯಲ್ಲಿ ಜೋಡುಪಾಲದ 400 ಜನ ಆಶ್ರಯ ಪಡೆದಿದ್ದಾರೆ. ಚೇರಂಬಾಣೆ ಗ್ರಾಮಸ್ಥರು ಅವರಿಗೆ ಆಶ್ರಯ ನೀಡುತ್ತಿದ್ದಾರೆ.

ನಿರಾಶ್ರಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆಂಬುಲೆನ್ಸ್ ಮೂಲಕ ಕರೆ ತಂದು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡಿ ಗಂಜಿಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಗಂಜಿಕೇಂದ್ರಗಳಲ್ಲಿ ಪುಟ್ಟ ಮಕ್ಕಳ ಆಕ್ರಂದನ ಮನಕಲಕುತ್ತಿದೆ.

ಕಾವೇರಿ ನಾಡು ಪ್ರವಾಹ ಹಾಗೂ ಬೆಟ್ಟಗುಡ್ಡ ಕುಸಿತದಿಂದ ನಲುಗುತ್ತಿದೆ. ಇನ್ನು ಹಲವು ಮಾರ್ಗಗಳು ಬಂದ್ ಆಗಿದ್ದು ಸಂಘ- ಸಂಸ್ಥೆಗಳು ಆಹಾರ, ಬಟ್ಟೆ, ಹೊದಿಕೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !