ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸದಿರಿ’

Last Updated 16 ಏಪ್ರಿಲ್ 2018, 12:11 IST
ಅಕ್ಷರ ಗಾತ್ರ

ಗುರುಮಠಕಲ್: ವಿಶ್ವದಲ್ಲಿ ಮನು ಕುಲವನ್ನು ಮೆಲೆತ್ತಲೆಂದು ಶ್ರಮಿಸಿದ ದಾರ್ಶನಿಕರು, ಚಿಂತಕರು, ಸಮಾಜ ಸುಧಾರಕರನ್ನು ಜಾತಿ-ಮತಗಳೆಂಬ ಪರದಿಯೊಳಗೆ ಮಾತ್ರವೇ ಸೀಮಿತಗೊಳಿಸುವುದು ಬೇಡ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಸಲಹೆ ನೀಡಿದರು.

ಇಮಾಲಪೂರ ಗ್ರಾಮದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಅಂಬೇಡ್ಕರ್ ಅವರು ವಿಶ್ವಚೇತನವಾಗಿದ್ದಾರೆ ಮತ್ತು ಅವರು ಸರ್ವಕಾಲಿಕ ದಾರ್ಶನಿಕರು’ ಎಂದರು.

ಭಾರತ ಸಂವಿದಾನವು ವಿಶ್ವದ ಸರ್ವಶ್ರೇಷ್ಟ ಲಿಖಿತ ಸಂವಿದಾನ ಎಂಬ ಹೆಗ್ಗಳಿಕೆ ಹೊಂದಲು ಅದರಲ್ಲಿ ಉದಾತ್ತ ಆಶಯಗಳು, ಸಮಾನತೆ ಹಕ್ಕುಗಳು ಹಾಗೂ ರಾಷ್ಟ್ರದ ಅಭ್ಯುದಯದ ಆಶಯಗಳಾದಿಯಾಗಿ ಒಂದು ಆದರ್ಶ ರಾಜ್ಯದ ಕಲ್ಪನೆಯನ್ನು ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ.

‘ಅಂಬೇಡ್ಕರ್ ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸಲು ಅವರ ಚಿಂತನೆಗಳನ್ನು ನಾವೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಡಾ.ಅಂಬೇಡ್ಕರ್ ಅವರಿಗೆ ಗೌರವಿಸಿದಂತಾಗುತ್ತದೆ’ ಎಂದು ಹೇಳಿದರು.

ಅಂಬೇಡ್ಕರ್ ಅವರ ಕುರಿತು ಇನ್ನಷ್ಟು ಅಧ್ಯಯನ ಮಾಡಬೇಕು. ಅವರ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ನರಸಪ್ಪ ಇಟ್ಕಲ್ ಅಧ್ಯಕ್ಷತೆ ವಹಿಸಿದ್ದರು, ಕೆ.ಬಿ.ವಾಸು, ಶರಣಗೌಡ ಕಂದಕೂರ, ರಘುನಾಥರೆಡ್ಡಿ ನಜರಾಪೂರ,ತಾ.ಪಂ ಸದಸ್ಯ ತಿಪ್ಪಣ್ಣ ಗುಟ್ಟಲ್, ಎಪಿಎಂಸಿ ಸದಸ್ಯ ಅನಂತಪ್ಪ ಬೋಯಿನ್, ಕೃಷ್ಣ ಚಪೆಟ್ಲಾ, ಹಣಮಂತು ಕರೆಶಪ್ಪೋಳು, ಅನೀಲ್ ಇಟ್ಕಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT