ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌತಿ ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೊಂಕಣ ರೈಲ್ವೆಯಿಂದ ಕ್ರಮ
Last Updated 27 ಜೂನ್ 2019, 14:20 IST
ಅಕ್ಷರ ಗಾತ್ರ

ಕಾರವಾರ:ಚೌತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಕೊಂಕಣ ರೈಲ್ವೆಯು ಮುಂಬೈ ಸೆಂಟ್ರಲ್, ಬಾಂದ್ರಾ ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರ ಹಮ್ಮಿಕೊಂಡಿದೆ.

ರೈಲು ಸಂಖ್ಯೆ 09001/ 09002 ಮುಂಬೈ ಸೆಂಟ್ರಲ್– ಮಂಗಳೂರು ಜಂಕ್ಷನ್– ಮುಂಬೈ ಸೆಂಟ್ರಲ್:09001 ಸಂಖ್ಯೆಯ ರೈಲು ಆ.28, ಸೆ.4 ಮತ್ತು 11ರಂದು ರಾತ್ರಿ 11.55ಕ್ಕೆ ಮುಂಬೈ ಸೆಂಟ್ರಲ್‌ನಿಂದ ಪ್ರಯಾಣ ಆರಂಭಿಸಲಿದೆ. ಆ ರೈಲು ಮರುದಿನ ರಾತ್ರಿ 11.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

09002 ಸಂಖ್ಯೆಯ ರೈಲು ಮಂಗಳೂರಿನಿಂದ ಆ.29, ಸೆ.5 ಮತ್ತು 12ರಂದು ಮುಂಬೈಗೆ ಪ್ರಯಾಣಿಸಲಿದ್ದು, ಮರುದಿನ ರಾತ್ರಿ 10.25ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ. ಈ ರೈಲುಗಳಿಗೆ ಜಿಲ್ಲೆಯ ಕಾರವಾರ, ಕುಮಟಾ, ಭಟ್ಕಳದಲ್ಲಿ ನಿಲುಗಡೆಯಿದೆ.

ರೈಲು ಸಂಖ್ಯೆ09009/09010 ಬಾಂದ್ರಾ (ಟರ್ಮಿನಲ್)– ಮಂಗಳೂರು ಜಂಕ್ಷನ್– ಬಾಂದ್ರಾ:09009 ಸಂಖ್ಯೆಯ ರೈಲು ಬಾಂದ್ರಾದಿಂದ ಮಂಗಳೂರು ಜಂಕ್ಷನ್‌ಗೆ ಸೆ.3 ಮತ್ತು 10ರಂದು ರಾತ್ರಿ 11.45ಕ್ಕೆ ಹೊರಡಲಿದೆ. ಮರುದಿನ ರಾತ್ರಿ 11.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

09010 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್‌ನಿಂದ ಸೆ.4 ಮತ್ತು 11ರಂದು ರಾತ್ರಿ 11.55ಕ್ಕೆ ಬಾಂದ್ರಾಕ್ಕೆ ಪ್ರಯಾಣಿಸಲಿದೆ. ಅದು ಮರುದಿನ ರಾತ್ರಿ 10ಕ್ಕೆತಲುಪಲಿದೆ.

ಹವಾನಿಯಂತ್ರಿತ ರೈಲು: ಇದೇ ನಿಲ್ದಾಣಗಳ ನಡುವೆ 09011 ಮತ್ತು 09012 ಸಂಖ್ಯೆಯ ಹವಾನಿಯಂತ್ರಿತ ವಿಶೇಷ ರೈಲುಗಳು ಸಂಚರಿಸಲಿವೆ. ಬಾಂದ್ರಾದಿಂದ ಸೆ.1ರಂದು ಮತ್ತು ಸೆ.8ರಂದು ಹೊರಡುವ ರೈಲು, ಮರುದಿನ ರಾತ್ರಿ 9.55ಕ್ಕೆ ಮಂಗಳೂರು ತಲುಪಲಿದೆ.09012 ಸಂಖ್ಯೆಯ ರೈಲು ಸೆ.2 ಮತ್ತು 9ರಂದು ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 10ಕ್ಕೆ ಬಾಂದ್ರಾ ಟರ್ಮಿನಲ್ ತಲುಪಲಿದೆ.

ಈ ರೈಲುಗಳಿಗೆ ವಿಶೇಷ ಪ್ರಯಾಣ ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ಕಾರವಾರ, ಕುಮಟಾ ಮತ್ತು ಭಟ್ಕಳದಲ್ಲಿ ನಿಲುಗಡೆಯಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT