ಗುರುವಾರ , ನವೆಂಬರ್ 21, 2019
26 °C

ಕೋರಮಂಗಲ: ನ್ಯಾಯಾಧೀಶರ ಮನೆಯಲ್ಲಿ ಕಳವು

Published:
Updated:

ಬೆಂಗಳೂರು: ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿರುವ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕೃತ್ಯ ಎಸಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

‘ನಗರದ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ನ್ಯಾಯಾಧೀಶರು, ಕೋರಮಂಗಲದಲ್ಲಿರುವ ವಸತಿ ಸಮಚ್ಚಯದ ಮನೆಗಳಲ್ಲಿ ವಾಸವಿದ್ದಾರೆ. ಆ ಸಮುಚ್ಚಯದ ಮನೆಯೊಂದರಲ್ಲಿ ಕಳ್ಳತನ ನಡೆದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಳ್ಳತನ ನಡೆದ ಬಗ್ಗೆ ಮಂಗಳವಾರ ಬೆಳಿಗ್ಗೆ ಮಾಹಿತಿ ಗೊತ್ತಾಯಿತು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ನ್ಯಾಯಾಧೀಶರಿಂದ ಪ್ರಾಥಮಿಕ ಮಾಹಿತಿ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಮನೆಯಲ್ಲಿದ್ದ ಯಾವ್ಯಾವ ವಸ್ತುಗಳು ಕಳುವಾಗಿವೆ ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಆ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.  

ಪ್ರತಿಕ್ರಿಯಿಸಿ (+)